ನವದೆಹಲಿ: ಹಿರಿಯ ರಾಜತಾಂತ್ರಿಕ ಅಧಿಕಾರಿ ಗೋಪಾಲ್ ಬಾಗ್ಲೆ ಅವರನ್ನು ಆಸ್ಟ್ರೇಲಿಯಾದಲ್ಲಿನ ಭಾರತೀಯ ಹೈ ಕಮಿಷನರ್ ಆಗಿ ನೇಮಕ ಮಾಡಲಾಗಿದೆ.
0
samarasasudhi
ಸೆಪ್ಟೆಂಬರ್ 13, 2023
ನವದೆಹಲಿ: ಹಿರಿಯ ರಾಜತಾಂತ್ರಿಕ ಅಧಿಕಾರಿ ಗೋಪಾಲ್ ಬಾಗ್ಲೆ ಅವರನ್ನು ಆಸ್ಟ್ರೇಲಿಯಾದಲ್ಲಿನ ಭಾರತೀಯ ಹೈ ಕಮಿಷನರ್ ಆಗಿ ನೇಮಕ ಮಾಡಲಾಗಿದೆ.
1992ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವಾ ಅಧಿಕಾರಿಯಾಗಿದ್ದರು. ಪ್ರಸ್ತುತ ಶ್ರೀಲಂಕಾದ ಭಾರತೀಯ ಹೈಕಮಿಷನರ್ ಆಗಿರುವ ಬಾಗ್ಲೆ ಅವರು ಆಸ್ಟ್ರೇಲಿಯಾದ ಭಾರತೀಯ ಹೈ ಕಮಿಷನರ್ ಆಗಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಬಾಗ್ಲೆ ಅವರು ಈಗಿರುವ ಮನ್‌ಪ್ರೀತ್ ವೋಹ್ರಾ ಅವರ ನಂತರ ಭಾರತೀಯ ಹೈ ಕಮಿಷನರ್ ಆಗಲಿದ್ದು, ಶೀಘ್ರದಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಬಾಗ್ಲೆ ಅವರು ಈ ಹಿಂದೆ ಭಾರತೀಯ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರರಾಗಿ, ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಇರಾನ್ ದೇಶಗಳ ಜಂಟಿ ನಿರ್ದೇಶಕರಾಗಿ ಹಾಗೂ ಇತ್ತೀಚೆಗೆ ಪ್ರಧಾನ ಮಂತ್ರಿ ಕಚೇರಿಯ ಜಂಟಿ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.