ಕಾಸರಗೋಡು: ನವಕೇರಳ ಕ್ರಿಯಾ ಯೋಜನೆ, ಹಸಿರು ಕೇರಳ ಮಿಷನ್‍ನ ಸಮಗ್ರ ಜಲಾನಯನ ಆಧಾರಿತ ಸಮಗ್ರ ಅಭಿವೃದ್ಧಿ ಯೋಜನೆ 'ನೀರ ಹರಿವು'ಅಭಿಯಾನದ ಅಂಗವಾಗಿ ಜಲ ಬಜೆಟ್ ಮತ್ತು ಜಿಲ್ಲಾ ತಾಂತ್ರಿಕ ಸಮಿತಿಯಿಂದ ಜಿಲ್ಲಾ ಮಟ್ಟದ ಕಾರ್ಯಾಗಾರ ಕಾಸರಗೋಡಿನಲ್ಲಿ ನಡೆಯಿತು. ಭವಿಷ್ಯದಲ್ಲಿ ನೀರಿನ ಕೊರತೆ ನಿವರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾ ಯೋಜನಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಎಲ್‍ಟಿಸಿ ಸಂಚಾಲಕ ಪಿ.ಟಿ.ಸಂಜೀವ್ ಅಧ್ಯಕ್ಷತೆ ವಹಿಸಿದ್ದರು. ನವಕೇರಳ ಸಂಯೋಜಕ ಕೆ.ಬಾಲಕೃಷ್ಣನ್ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು. ಡಿಡಿಎಂಎ ಅಪಾಯಗಳ ವಿಶ್ಲೇಷಕರಾದ ಪ್ರೇಂಪ್ರಕಾಶ್ ಅವರು 'ಬರ ಎದುರಿಸುವ ಬಗ್ಗೆ ಸಿದ್ಧತೆ' ಕುರಿತು ಮಾತನಾಡಿದರು.
ಪಿ.ರಮೇಶನ್, ಎ.ಪಿ.ಸುಧಾಕರನ್, ವಿಷ್ಣು ಎಸ್.ನಾಯರ್, ಬಿ.ಎಸ್.ಅನುರಾಧ, ಕೆ.ಕೆ.ರಾಘವನ್, ಎ.ಅನೂಪ್, ಇ.ಎ.ಅರ್ಜುನ್, ಪಿ.ಪ್ರದೀಪ್, ಎ.ಪಿ. ಶ್ರೀಜಿತ್, ಕೆ.ಪಿ.ಸೀಮಾ, ಟಿ.ರಾಗೇಶ್, ಕೆ.ಅಶ್ರಫ್, ಬಿ.ಎಸ್.ಪ್ರಮೋದ್ ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಕಾರ್ಯಾಗಾರದಲ್ಲಿ ಬ್ಲಾಕ್ ಪಂಚಾಯತ್ ಕಾರ್ಯದರ್ಶಿಗಳು, ಬ್ಲಾಕ್ ಮಟ್ಟದ ತಾಂತ್ರಿಕ ಸಮಿತಿ ಸದಸ್ಯರು, ಎಂಆರ್‍ಇಜಿಇಎ ಬ್ಲಾಕ್ ಇಂಜಿನಿಯರ್‍ಗಳು, ಕಾಂಞಂಗಾಡ್ ಬ್ಲಾಕ್ ಎಂಆರ್‍ಇಜಿಇಎ ಇಂಜಿನಿಯರ್‍ಗಳು ಮತ್ತು ನವಕೇರಳ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು. ಉದ್ಯೋಗ ಖಾತ್ರಿ ಯೋಜನೆ ಜಿಲ್ಲಾ ಅಭಿಯಂತರ ಸಾದಾ ಅಬ್ದುಲ್ ರೆಹಮಾನ್ ಸ್ವಾಗತಿಸಿದರು. ಬ್ಲಾಕ್ ಹೆಡ್ ಕಾರ್ಯಾಗಾರ ಮತ್ತು ಪಂಚಾಯತ್ ಕಾರ್ಯಾಗಾರವನ್ನು ಅಕ್ಟೋಬರ್ ನಲ್ಲಿ ಆಯೋಜಿಸಲು ಸಭೆ ತೀರ್ಮಾನಿಸಿತು.

