ಕೊಲ್ಲಂ: ಪ್ರಸಿದ್ದ ಪೊರುವಾಹಿಯ ಮಲನಾಡ ದೇವಸ್ಥಾನಕ್ಕೆ 101 ವಿದೇಶಿ ಮದ್ಯದ ಬಾಟಲಿಗಳನ್ನು ಭಕರೊಬ್ಬರು ಹರಕೆಯಾಗಿ ಅರ್ಪಿಸಿ ಅಚ್ಚರಿ ಮೂಡಿಸಿದ್ದಾರೆ. ವಿವಿಧ ಬ್ರಾಂಡ್‍ಗಳ ಮದ್ಯವನ್ನು ವಿವಿಧ ಗಾತ್ರದ ಬಾಟಲಿಗಳಲ್ಲಿ ಅರ್ಪಿಸಲಾಗಿದೆ.
ಪೆರುವಿರುತ್ತಿಯಲ್ಲಿರುವ ಮಲನಾಡ ದುರ್ಯೋಧನ ದೇವಾಲಯವು ದಕ್ಷಿಣ ಕೇರಳದ ಏಕೈಕ ದುರ್ಯೋಧನ ದೇವಾಲಯವಾಗಿದೆ. ಇದು ಆಚರಣೆಗಳಿಂದ ಇತರ ದೇವಾಲಯಗಳಿಗಿಂತ ಭಿನ್ನವಾಗಿದೆ.
ಕೋಳಿ ಸಹಿತ ಮದ್ಯ, ಮಾಂಸಗಳು ಇಲ್ಲಿಯ ವಿಶಿಷ್ಟ ನೈವೇದ್ಯವಾಗಿದ್ದು, ಉದ್ದೇಶ ಸಾಕಾರತೆಗೆ ಶೇಂದಿ ನೀಡಲಾಗುತ್ತದೆ.
ಮದ್ಯ ನೈವೇದ್ಯವನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಮಂದಿ ಆಗಮಿಸಿದ್ದರು.ಭಕ್ತರಿಂದ ಕಾಣಿಕೆಯಾಗಿ ಪಡೆದ ಮದ್ಯವನ್ನು ವ್ಯವಸ್ಥಾಪನಾ ಸಮಿತಿ ವತಿಯಿಂದ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಉಚಿತವಾಗಿ ನೀಡಲಾಗುವುದು.


