ಕಾಸರಗೋಡು: ಜನ ಮೈತ್ರಿ ಪೆÇಲೀಸ್, ಮಲಬಾರ್ ಗೋಲ್ಡ್ ಕಾಸರಗೋಡು, ಮಂಗಳೂರಿನ ಯೇನಪೆÇೀಯ ವೈದ್ಯಕೀಯ ಕಾಲೇಜು ವಿಕಲಚೇತನ ಮಕ್ಕಳಿಗಾಗಿ ಜಂಟಿಯಾಗಿ ಆಯೋಜಿಸಿದ್ದ ಉಚಿತ ವೈದ್ಯಕೀಯ ಶಿಬಿರ ಅಂಗವಿಕಲ ಮಕ್ಕಳಲ್ಲಿ ಆಶಾಭಾವನೆ ಮೂಡಿಸಿತು.
ವಿದ್ಯಾನಗರ ಲಯನ್ ಕ್ಲಬ್ ಸಭಾಂಗಣದಲ್ಲಿ ವೈದ್ಯಕೀಯ ಶಿಬಿರ ಆಯೋಜಿಸಲಾಗಿತ್ತು. ಕಾಸರಗೋಡು ಜಿಲ್ಲಾ ಪೆÇಲೀಸ್ ವರಿಷ್ಟಾಧಿಕಾರಿ ಡಾ.ವೈಭವ್ ಸಕ್ಸೇನಾ ಐಪಿಎಸ್ ಖುದ್ದು ಮಕ್ಕಳನ್ನು ತಪಾಸಣೆ ನಡೆಸುವ ಮೂಲಕ ಶಿಬಿರ .ಉದ್ಘಾಟಿಸಿದರು. ಕಾಸರಗೋಡು ಡಿವೈಎಸ್ಪಿ. ಪಿ.ಕೆ.ಸುಧಾಕರನ್ ಅಧ್ಯಕ್ಷತೆ ವಹಿಸಿದ್ದರು. ಎಂ.ಎ.ನಾಸರ್, ಕಾಸಿಂ ಟಿ., ಯೇನಪೆÇೀಯ ವೈದ್ಯಕೀಯ ಕಾಲೇಜು ಶಿಬಿರ ಸಾಮಾಜಿಕ ವಿಭಾಗದ ಮುಖ್ಯಸ್ಥ ಅಬ್ದುಲ್ ರಝಾಕ್, ಜನ ಮೈತ್ರಿ ಬೀಟ್ ಅಧಿಕಾರಿಗಳು ಕೃಪೇಶ್. ಸಂತೋಷ್, ಗ್ರೀಷ್ಮಾ. ಟ್ರಾಮಾ ಕೇರ್ ಕಮಿಟಿ ಅಧ್ಯಕ್ಷ ಶಾಫಿ ಕಲ್ಲುವಳಪ್, ಸುಲೇಖಾ ಮಾಹಿನ್, ಮಾಹಿನ್ ಕುನ್ನಿಲ್. ಕರೀಂ ಚೌಕಿ ಪೆÇಲೀಸ್ ಅಧಿಕಾರಿಗಳು, ಸಾಮಾಜಿಕ.ಸಾಂಸ್ಕøತಿಕ ಆರೋಗ್ಯ ಕ್ಷೇತ್ರ ಪ್ರತಿನಿಧಿಗಳು ಉಪಸ್ಥಿತರಿದ್ದರು. ಡಿವೈಎಸ್ಪಿ ಸಾಬು ಪಿ.ಕೆ ಸ್ವಾಗತಿಸಿದರು. ಕಾಸರಗೋಡು ಠಾಣಾಧಿಕಾರಿ ಅಜಿತ್ ಕುಮಾರ್ ವಂದಿಸಿದರು.




