HEALTH TIPS

ಅಲಾಮಿಪಲ್ಲಿ ಹೊಸ ಬಸ್ ನಿಲ್ದಾಣ-ನ.2ರಿಂದ ಭಾಗಶಃ ಸಂಚಾರ ನಿಯಂತ್ರಣ

             

               ಕಾಸರಗೋಡು: ಲೋಕೋಪಯೋಗಿ ಇಲಾಖೆಯ ಕಾಞಂಗಾಡು ವಿಭಾಗದ ಕಾಸರಗೋಡು-ಕಾಞಂಗಾಡ್ ರಾಷ್ಟ್ರೀಯ ಹೆದ್ದಾರಿ ಅಲಾಮಿಪಲ್ಲಿ ಹೊಸ ಬಸ್ ನಿಲ್ದಾಣದ ಬಳಿ ಕಿ.ಮೀ 28/500ರಲ್ಲಿ ಕಿರುಸೇತುವೆ ಪುನ:ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಪ್ರಸಕ್ತ ರಸ್ತೆಯಲ್ಲಿ ನವೆಂಬರ್ 2ರಿಂದ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.   ಕಾಮಗಾರಿ ಪೂರ್ಣಗೊಳ್ಳುವ ವರೆಗೆ ರಸ್ತೆ ಭಾಗಶಃ ಮುಚ್ಚುಗಡೆಗೊಳ್ಳಲಿದೆ. ಈ ರಸ್ತೆಯ ಮೂಲಕ ಹೋಗಬೇಕಾದ ವಾಹನಗಳು ಮತ್ತು ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿ ಅಥವಾ ಅಲಾಮಿಪಲ್ಲಿ ಕೂಲಿಯಾಂಗಲ್ ರಸ್ತೆ ಮೂಲಕ ಸಂಚರಿಸಬೇಕು ಎಂದು ಕಾಞಂಗಾಡ್ ಪಿಡಬ್ಲ್ಯುಡಿ (ರಸ್ತೆಗಳು) ವಿಭಾಗದ ಸಹಾಯಕ ಇಂಜಿನಿಯರ್ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries