ಕಾಸರಗೋಡು: ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಕಛೇರಿಯು ಧನ್ವಂತರಿ ಕೇಂದ್ರದ ಫಂಡ್ ಉಪಯೋಗಿಸಿ ವಿದ್ಯಾನಗರದ ಪೆÇೀಸ್ಟ್ ಮೆಟ್ರಿಕ್ ಹಾಸ್ಟೆಲ್‍ಗಳ 40 ಮಕ್ಕಳಿಗೆ ಪ್ರತಿ ಶನಿವಾರ ಮತ್ತು ಭಾನುವಾರ ಪಿ.ಎಸ್.ಸಿ ಪರೀಕ್ಷಾ ತರಬೇತಿಯನ್ನು ನಡೆಸಿಕೊಡಲಿದೆ.
ತಿಂಗಳಿಗೆ 16 ಗಂಟೆಯಂತೆ ಆರು ತಿಂಗಳಲ್ಲಿ (96 ಗಂಟೆ) ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ. ಕೋಚಿಂಗ್ ನೀಡಲು ಅರ್ಹರಾಗಿರುವ ಪಿ.ಎಸ್.ಸಿ ಪರೀಕ್ಷೆಯ ತರಬೇತಿ ನೀಡುವುದರಲ್ಲಿ ಪೂರ್ವ ಅನುಭವ ಹೊಂದಿರುವ ವ್ಯಕ್ತಿಗಳು ಯಾ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತರಬೇತುದಾರರಿಗೆ ಗಂಟೆಯ ಆಧಾರದ ಮೇಲೆ ವೇತನ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಲೆಟರ್‍ಹೆಡ್ ಅಥವಾ ಬಿಳಿ ಕಾಗದದ ಮೇಲೆ ಸಿದ್ಧಪಡಿಸಿದ ಅರ್ಜಿ ಮತ್ತು ಹಿಂದಿನ ಅನುಭವದ ಸಾಕ್ಷ್ಯ ಪತ್ರದೊಂದಿಗೆ ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಕಛೇರಿ, ಸಿವಿಲ್ ಠಾಣೆ, ವಿದ್ಯಾನಗರ, ಕಾಸರಗೋಡು-671123 ಎಂಬ ವಿಳಾಸಕ್ಕೆ ಸಲ್ಲಿಸಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 256162)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




