ಕಾಸರಗೋಡು: ಪಿಲಿಕೋಡ್‍ನ ಸಿ.ಕೆ.ಎನ್.ಎಸ್. ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಕೇರಳ ಯುವ ಕಲ್ಯಾಣ ಮಂಡಳಿ ಜಂಟಿಯಾಗಿ ಆಯೋಜಿಸಿರುವ ಜಿಲ್ಲಾ ಕೇರಳೋತ್ಸವದ ಸಂಘಟನಾ ಸಮಿತಿ ಕಚೇರಿಯನ್ನು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಾಧವನ್ ಮಣಿಯೇರ ಉದ್ಘಾಟಿಸಿದರು. ಪಿಲಿಕೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಪಿ.ಪ್ರಸನ್ನ ಕುಮಾರಿ, ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಪಿ.ಕೆ.ಲಕ್ಷ್ಮಿ, ಜಿಲ್ಲಾ ಪಂಚಾಯಿತಿ ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮನು, ಎಂ.ವಿನಯನ್ ಮಾಸ್ತರ್ ಮಾತನಾಡಿದರು. ನವೆಂಬರ್ 4 ಮತ್ತು 5 ರಂದು ಜಿಲ್ಲಾ ಕೇರಳ ಉತ್ಸವದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.





