ಬದಿಯಡ್ಕ: ಕಾಸರಗೋಡು ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಕಾಸರಗೋಡು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಾಸರಗೋಡು ಜಿಲ್ಲಾ ಘಟಕ ವತಿಯಿಂದ ಬದಿಯಡ್ಕ ಸನಿಹದ ವಳಮಲೆಯ ಇರಾ ಸಭಾಂಗಣದಲ್ಲಿ ಮಂಗಳವಾರ ಕೇರಳ ಕನ್ನಡ ಪತ್ರಕರ್ತರ ಸಮ್ಮಿಲನ 'ಹರ್ಷೋಲ್ಲಾಸ' ಕಾರ್ಯಕ್ರಮದಲ್ಲಿ ಕೃಷ್ಣೈಕ್ಯ ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ ಹೆಸರಲ್ಲಿ ಕೊಡಮಾಡುವ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಕರ್ನಾಟಕ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮ್ಮದ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಗಡಿನಾಡ ಕನ್ನಡಿಗರ ಸಮಸ್ಯೆ ಪರಿಹರಕ್ಕೆ ಸರ್ಕಾರ ಸದ ಬದ್ಧವಾಗಿರಲಿದೆ. ಕಾಸರಗೋಡಿನಲ್ಲಿ ನಡೆಯುತ್ತಿರುವ ಕಲಾ, ಸಾಹಿತ್ಯಿಕ, ಸಾಂಸ್ಕøತಿಕ ಚಟುವಟಿಕೆಗಳು ಇತರರಿಗೆ ಮಾದರಿಯಾಗಿರುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಮಂಗಳೂರು ಮಾತನಾಡಿ, ಪತ್ರಕರ್ತನಾದವನಿಗೆ ಮಾತೇ ಸಂವಹನವಾಗಬೇಕು. ಪತ್ರಕರ್ತನಾದವನು ಕಾವ್ಯಾತ್ಮಕ ನಂಟು ಬೆಳೆಸಿಕೊಂಡಾಗ ಸಮರ್ಥ ಪತ್ರಕರ್ತನಾಗಿ ಬೆಳೆಯಲು ಸಾಧ್ಯ ಎಂದು ತಿಳಿಸಿದರು.
ಕಾಂಗ್ರೆಸ್ ವಕ್ತಾರ ಟಿ.ಎಂ ಸಯೀದ್, ಎಣ್ಮಕಜೆ ಗ್ರಾಪಂ ಅಧ್ಯಕ್ಷ ಜೆ.ಎಸ್ ಸೋಮಶೇಖರ್, ಬದಿಯಡ್ಕ ಗ್ರಾಪಂ ಸದಸ್ಯ ಮಾಹಿನ್ ಕೇಲೋಟ್, ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಎ.ಆರ್ ಸುಬ್ಬಯ್ಯಕಟ್ಟೆ, ಕೆಯುಡಬ್ಲ್ಯೂಜೆ ದ.ಕ ಜಿಲ್ಲಾ ಘಟಕ ಅದ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ರಾಜ್ಯಸಮಿತಿ ಸದಸ್ಯ ಅಖಿಲೇಶ್ ನಗುಮುಗಂ, ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಕಾರ್ಯದರ್ಶಿ ಗಂಗಾಧರ್ ತೆಕ್ಕೆಮೂಲೆ, ರವಿ ನಾಯ್ಕಾಪು ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಪತ್ರಕರ್ತರ ಗುರುತಿನ ಚೀಟಿ ವಿತರಣೆ ನಡೆಯಿತು. ಬೆಳಗ್ಗೆ ಅರಂಭಗೊಂಡ ಕಾರ್ಯಕ್ರಮಕ್ಕೆ ವಳಮಲೆ ಇರಾ ಸಭಾ ಭವನದ ಗಂಗಾಧರ ಆಳ್ವ ದೀಪ ಬೆಳಗಿಸಿ ಚಾಲನೆ ನೀಡಿದರು. ಡಾ. ಜಯಪ್ರಕಾಶ್‍ನಾರಾಯಣ್ ತೊಟ್ಟೆತ್ತೋಡಿ, ಅಶ್ವತ್ ಲಾಲ್‍ಬಾಗ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರು, ಸಾಮಾಜಿಕ, ಸಾಂಸ್ಕøತಿಕ, ಸಾಹಿತ್ಯಿಕ ಸಂಘಟನೆ ಪದಾಧಿಕಾರಿಗಳು, ಕಲಾವಿದರು ಪಾಲ್ಗೊಂಡಿದ್ದರು. ಪತ್ರಕರ್ತರ ಕುಟುಂಬ ಸದಸ್ಯರು ಹಾಗೂ ಇತರ ಕಲಾವಿದರಿಂದ ರಾಗ-ತಾಳ-ನಾಟ್ಯ, ಅದೃಷ್ಟ ಚೀಟಿ ಕಾರ್ಯಕ್ರಮ ನಡೆಯಿತು.




