ನವದೆಹಲಿ: ದೇಶದಿಂದ ತನ್ನ 41 ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಮಾಡಿರುವುದು ಅಂತರರಾಷ್ಟ್ರೀಯ ನಿಯಮಗಳ ಉಲ್ಲಂಘನೆ ಎಂಬಂತೆ ಬಿಂಬಿಸುವ ಕೆನಡಾದ ಯತ್ನಗಳನ್ನು ಭಾರತ ಶುಕ್ರವಾರ ತಿರಸ್ಕರಿಸಿದೆ.
0
samarasasudhi
ಅಕ್ಟೋಬರ್ 21, 2023
ನವದೆಹಲಿ: ದೇಶದಿಂದ ತನ್ನ 41 ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಮಾಡಿರುವುದು ಅಂತರರಾಷ್ಟ್ರೀಯ ನಿಯಮಗಳ ಉಲ್ಲಂಘನೆ ಎಂಬಂತೆ ಬಿಂಬಿಸುವ ಕೆನಡಾದ ಯತ್ನಗಳನ್ನು ಭಾರತ ಶುಕ್ರವಾರ ತಿರಸ್ಕರಿಸಿದೆ.
ರಾಜತಾಂತ್ರಿಕ ಸಿಬ್ಬಂದಿ ಸಂಖ್ಯೆ ವಿಷಯದಲ್ಲಿ ಸಮಾನತೆಯನ್ನು ಖಾತ್ರಿಪಡಿಸುವುದಕ್ಕಾಗಿ ಕೈಗೊಂಡಿರುವ ಕ್ರಮವು, ರಾಜತಾಂತ್ರಿಕ ಸಂಬಂಧಗಳ ಕುರಿತ ವಿಯೆನ್ನಾ ಒಪ್ಪಂದಕ್ಕೆ ಅನುಗುಣವಾಗಿಯೇ ಇದೆ ಎಂದು ಹೇಳುವ ಮೂಲಕ ತನ್ನ ನಿಲುವನ್ನು ಭಾರತ ಸಮರ್ಥಿಸಿಕೊಂಡಿದೆ.
ತನ್ನ ರಾಜತಾಂತ್ರಿಕ ಅಧಿಕಾರಿಗಳನ್ನು ಹಿಂದಕ್ಕೆ ಕರೆಸಿಕೊಂಡ ನಂತರ ಮಾತನಾಡಿದ್ದ ಕೆನಡಾ ವಿದೇಶಾಂಗ ಸಚಿವೆ ಮೆಲಾನಿ ಜೋಲಿ, 'ಭಾರತದ ನಡೆಯು ಅಂತರರಾಷ್ಟ್ರೀಯ ಕಾನೂನಿಗೆ ವಿರುದ್ಧವಾದುದು ಹಾಗೂ ವಿಯೆನ್ನಾ ಒಪ್ಪಂದದ ಉಲ್ಲಂಘನೆ' ಎಂದು ಹೇಳಿದ್ದರು. ಇದರ ಬೆನ್ನಲ್ಲೇ, ವಿದೇಶಾಂಗ ಸಚಿವಾಲಯ ಈ ಪ್ರತಿಕ್ರಿಯೆ ನೀಡಿದೆ.
'ಈ ವಿಚಾರದಲ್ಲಿ ಭಾರತ ಕೈಗೊಂಡ ಕ್ರಮವು ವಿಯೆನ್ನಾ ಒಪ್ಪಂದದ 11.1ನೇ ವಿಧಿಗೆ ಅನುಗುಣವಾಗಿಯೇ ಇದೆ' ಎಂದೂ ಸಚಿವಾಲಯ ಹೇಳಿದೆ.