ಕಾಸರಗೋಡು: ರಂಗಚಿನ್ನಾರಿ ಕಾಸರಗೋಡು ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ರಂಗಚಿನ್ನಾರಿ ಸಂಗೀತಘಟಕ ಸ್ವರಚಿನ್ನಾರಿ ಏರ್ಪಡಿಸುವ ಖ್ಯಾತ ಸಂಗೀತ ನಿರ್ದೇಶಕ, ಅಂತಾರಾಷ್ಟ್ರೀಯ ಖ್ಯಾತಿಯ ಮೆಂಡೋಲಿನ್ ವಾದಕ ಎನ್.ಎಸ್ ಪ್ರಸಾದ್ ನೇತೃತ್ವದಲ್ಲಿ ಸ್ವರ ಸಂಗೀತ ಶಿಬಿರ 'ಸ್ವರ ಸಂಚಾರ'ಕಾರ್ಯಕ್ರಮ ಅ.28ರಂದು ಬೆಳಗ್ಗೆ 9.30ರಿಂದ ಸಂಜೆ 4.30ರ ವರೆಗೆ ಕರಂದಕ್ಕಾಡು ಪದ್ಮಗಿರಿ ಕಲಾಕುಟೀರದಲ್ಲಿ ಜರುಗಲಿರುವುದು. ಬೆಳಗ್ಗೆ 10ರಿಂದ 10.15ರ ವರೆಗೆ ಕನ್ನಡ ಹೋರಾಟಗಾರ, ಕವಿ ಎಂ. ಗಂಗಾಧರ ಭಟ್ ಅವರ ಸಂಸ್ಮರಣೆ ನಡೆಯುವುದು.
ಗಾನ ಪ್ರವೀಣ, ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು ಶಿಬಿರ ಉದ್ಘಾಟಿಸುವರು. ಸ್ವರ ಚಿನ್ನಾರಿ ಗೌರವಾಧ್ಯಕ್ಷ, ಖ್ಯಾತ ಕವಿ ಶ್ರೀಕೃಷ್ಣಯ್ಯ ಅನಂತಪುರ ಅಧ್ಯಕ್ಷತೆ ವಹಿಸುವರು. ಮಣಿಪಾಲ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ನಿರ್ದೇಶಕಿ ವಿದುಷಿ ಉಮಾ ಶಂಕರಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಆಶೀರ್ವಚನ ನಿಡುವರು. ಡಾ. ಅನಂತಕಾಮತ್ ಗೌರವ ಉಪಸ್ಥಿತರಿರುವರು.
ಶಿಬಿರದಲ್ಲಿ ಪಾಲ್ಗೊಳ್ಳಲಿಚ್ಛಿಸುವವರು ಅ. 18ರ ಮುಂಚಿತವಾಗಿ ಸ್ವರಚಿನ್ನಾರಿ ಕಾರ್ಯದರ್ಶಿ ಕಿಶೋರ್ ಪೆರ್ಲ(8075284452) ಅಥವಾ ಜತೆಕಾರ್ಯದರ್ಶಿ ಪ್ರತಿಜ್ಞಾ ರಂಜಿತ್(9741919699)ಅವರಲ್ಲಿ ಹೆಸರು ನೋಂದಾಯಿಸುವಂತೆ ಪ್ರಕಟಣೆ ತಿಳಿಸಿದೆ.


