ಕಾಸರಗೋಡು: ಮಂಜೇಶ್ವರ ವಿಧಾನಸಭಾ ಚುನಾವಣೆ ಸಂದರ್ಭ ಬಿಎಸ್‍ಪಿ ಅಭ್ಯರ್ಥಿಯೊಬ್ಬರಿಗೆ ಲಂಚದ ಆಮಿಷವೊಡ್ಡಿರುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ರಆಜ್ಯಾಧ್ಯಕ್ಷ ಕೆ. ಸಉರೇಂದ್ರನ್ ಸೇರಿದಂತೆ ಎಲ್ಲ ಐದು ಮಂದಿಗೆ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಕೆ. ಸುರೇಂದ್ರನ್ ಸೇರಿದಂತೆ ಎಲ್ಲ ಐದು ಮಂದಿಗೆ ಅ. 25ರಂದು ಖುದ್ದು ಹಾಜರಾಗುವಂತೆ ನ್ಯಾಯಾಲಯ ಸೂಚಿಸಿತ್ತು. ಆರೋಪ ಆಧಾರರಹಿತ ಹಾಗೂ ಕಪೋಲಕಲ್ಪಿತ ಎಂಬುದಾಗಿ ಕೆ. ಸುರೇಂದ್ರನ್ ಸೇರಿದಂತೆ ಐದೂ ಮಂದಿ ನ್ಯಾಐಆಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದರು. ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದಿಂದ ಬಿಎಸ್ಪಿಯಿಂದ ಸ್ಪರ್ಧಿಸಿದ್ದ ಸುಂದರ ಅವರಿಗೆ ನಾಮಪತ್ರ ಹಿಂದಕ್ಕೆ ಪಡೆಯಲು ಹಣ ಮತ್ತು ಮೊಬೈಲ್ ಲಂಚದ ರೂಪದಲ್ಲಿ ನೀಡಲಾಗಿತ್ತು ಎಂದು ಆರೋಪಿಸಿ ಎಡರಂಗದ ಅಭ್ಯರ್ಥಿಯಗಿ ಸ್ಪರ್ಧಿಸಿದ್ದ ವಿ.ವಿ ರಮೇಶನ್ 2021 ಜೂನ್ ತಿಂಗಳಲ್ಲಿ ದೂರು ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಕೆ. ಸುರೇಂದ್ರನ್ ಇದೇ ಮೊದಲ ಬಾರಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಪ್ರಕರಣದಲ್ಲಿ ಸುರೇಂದ್ರನ್ ಅವರನ್ನು ಮೊದಲ ಆರೋಪಿಯಾಗಿ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಕ್ರೈಂ ಬ್ರಾಂಚ್ ಎಫ್‍ಐಆರ್ ಸಲ್ಲಿಸಿತ್ತು. ಪ್ರಕರಣದ ಮುಂದಿನ ತನಿಖೆಯನ್ನು ನ. 15ಕ್ಕೆ ಮುಂದೂಡಲಾಗಿದೆ.


