ತಿರುವನಂತಪುರ: ಹಮಾಸ್ ಭಯೋತ್ಪಾದಕರನ್ನು ಬೆಂಬಲಿಸಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಪೋಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಗುಪ್ತಚರ ಇಲಾಖೆ ಒತ್ತಾಯಿಸಿದೆ.
ತೊಡುಪುಳದ ಪೋಲೀಸ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.
ತೊಡುಪುಳದಲ್ಲಿ ಹಮಾಸ್ ಪರ ರ್ಯಾಲಿಯಲ್ಲಿ ಕೆಲವರು ಪೋಲೀಸರು ಭಾಗವಹಿಸಿದ್ದರು. ಘಟನೆ ಕುರಿತು ಗುಪ್ತಚರ ಗೃಹ ಇಲಾಖೆಗೆ ವರದಿ ನೀಡಲಾಗಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆ ಪಿಎಫ್‍ಐ ಜತೆ ಕೆಲವು ಪೋಲೀಸರು ಸಂಪರ್ಕ ಹೊಂದಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.


