ತಿರುವನಂತಪುರಂ: ಖ್ಯಾತ ಪಿಟೀಲು ವಾದಕ ಬಾಲಭಾಸ್ಕರ್ ಸಾವಿನ ಪ್ರಕರಣದ ಮುಂದಿನ ತನಿಖೆಗೆ ಹೈಕೋರ್ಟ್ ಆದೇಶ ನೀಡಿದೆ. ಷಡ್ಯಂತ್ರ ನಡೆದಿದ್ದರೆ ಅದನ್ನು ಪತ್ತೆ ಹಚ್ಚಿ ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಬಾಲಭಾಸ್ಕರ್ ಅವರ ತಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. ಪ್ರಸ್ತುತ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ.
ಬಾಲಭಾಸ್ಕರ್ ಸಾವಿನ ಸುತ್ತ ಹಲವು ನಿಗೂಢತೆಗಳಿದ್ದವು. ಸ್ಥಳೀಯ ಪೋಲೀಸರು, ಕ್ರೈಂ ಬ್ರಾಂಚ್ ಸೇರಿದಂತೆ ಹಿಂದಿನ ತನಿಖಾ ಸಂಸ್ಥೆಗಳು ಸರಿಯಾಗಿ ತನಿಖೆ ನಡೆಸಿ ಸ್ಪಷ್ಟ ತೀರ್ಮಾನಕ್ಕೆ ಬಂದಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದರ ಬೆನ್ನಲ್ಲೇ ಬಾಲಭಾಸ್ಕರ್ ತಂದೆ ಸಿ.ಬಿ.ಐ. ತನಿಖೆ ಹಾಗೂ ಸಿಬಿಐಗೆ ಹೈಕೋರ್ಟ್ ಮೊರೆ ಹೋಗಲಾಗಿತ್ತು ಪ್ರಕರಣದ ತನಿಖೆ ನಡೆದಿದೆ.
ತನಿಖಾ ಸಂಸ್ಥೆಗಳ ಮುಂದೆ ಬಾಲಭಾಸ್ಕರ್ ಅವರ ತಂದೆ ಮತ್ತು ಸಂಬಂಧಿಕರು ಎತ್ತಿರುವ ಹಲವು ದೂರುಗಳನ್ನು ಸರಿಯಾಗಿ ಪರಿಗಣಿಸಿಲ್ಲ ಎಂದು ಆರೋಪಿಸಲಾಗಿದೆ. ಹೀಗಿರುವಾಗಲೇ ಬಾಲಭಾಸ್ಕರ್ ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಬಾಲಭಾಸ್ಕರ್ ಸಾವಿಗೆ ಕಾರಣವಾದ ಅಪಘಾತವು 2018 ರಲ್ಲಿ ಸಂಭವಿಸಿದೆ. ಪಾರಿಪಲ್ಲಿ ಪಳ್ಳಿಪುÅರಂನಲ್ಲಿ ನಡೆದ ಅಪಘಾತದಲ್ಲಿ ಬಾಲಭಾಸ್ಕರ್ ಮತ್ತು ಅವರ ಪುತ್ರಿ ಸಾವನ್ನಪ್ಪಿದ್ದರು. ಅಪಘಾತದಲ್ಲಿ ಚಿನ್ನ ಕಳ್ಳಸಾಗಣೆ ತಂಡಗಳು ಭಾಗಿಯಾಗಿವೆ ಎಂಬುದು ಸೇರಿದಂತೆ ಹಲವು ಆರೋಪಗಳಿದ್ದವು.


