ಕಾಸರಗೋಡು: ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಡಿಸೆಂಬರ್ 5ರಿಂದ 9ರ ವರೆಗೆ ಮುಳ್ಳೇರಿಯಾದ ಕಾರಡ್ಕ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಲಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಶಾಲೆಯಲ್ಲಿ ನಡೆದ ಸಂಘಟನಾ ಸಮಿತಿ ಸಭೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಅಧ್ಯಕ್ಷತೆ ವಹಿಸಿದ್ದರು. ಒಟ್ಟು 12ವೇದಿಕೆಗಳಲ್ಲಾಗಿ ಜಿಲ್ಲಾ ಕಲೋತ್ಸವದ ವಿವಿಧ ಸ್ಪರ್ಧೆಗಳು ನಡೆಯಲಿವೆ.
21 ವರ್ಷಗಳ ಅವಧಿಯ ನಂತರ ಕಾರಡ್ಕ ಜಿವಿಎಚ್‍ಎಸ್ ಶಾಲೆಗೆ ಜಿಲ್ಲಾ ಶಾಲಾ ಕಲೋತ್ಸವದ ಆತಿಥ್ಯ ವಹಿಸಲು ಅವಕಾಶ ಲಭಿಸಿದೆ. ಕಲಾ ಉತ್ಸವ ನಡೆಸಲು ಸ್ವಾಗತ ಸಮಿತಿ ರಚಿಸಲಾಯಿತು. ಸಂಸದ ರಾಜಮೋಹನ್ ಉಣ್ಣಿತ್ತಾನ್, ಶಾಸಕರಾದ ಎ.ಕೆ.ಎಂ.ಅಶ್ರಫ್, ಎನ್.ಎ.ನೆಲ್ಲಿಕುನ್ನು, ಸಿ.ಎಚ್.ಕುಂಜಂಬು, ಇ.ಚಂದ್ರಶೇಖರನ್, ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೇನಾ, ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ರಕ್ಷಾಧಿಕಾರಿಗಳಾಗಿರುವ ಸ್ವಾಗತ ಸಮಿತಿ ರಚಿಸಲಾಯಿತು.
ಸಂಘಟನಾ ಸಮಿತಿ ಅಧ್ಯಕ್ಷರಾಗಿ ಎನ್.ಎ.ನೆಲ್ಲಿಕುನ್ನು, ಕಾರ್ಯಾಧ್ಯಕ್ಷರಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಪ್ರಧಾನ ಸಂಚಾಲಕರನ್ನಾಗಿ ಡಿ.ಡಿ.ಇ. ಎನ್.ನಂದಿಕೇಶನ್ ಅªವರನ್ನು ಆಯ್ಕೆ ಮಾಡಲಾಯಿತು. ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್.ಎನ್.ಸರಿತಾ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ. ಸಹಾಯಕ ಕನ್ವೀನರ್‍ಗಳಾಗಿ ವಿಎಚ್‍ಸಿ ಸಹಾಯಕ ನಿರ್ದೇಶಕಿ ಉದಯಕುಮಾರಿ, ಹೈಯರ್ ಸೆಕೆಂಡರಿ ಆರ್‍ಡಿಡಿ ಮಣಿಕಂಠನ್, ಮಾಯಿಪ್ಪಾಡಿಯ ಡಯೆಟ್ ಪ್ರಾಂಶುಪಾಲ ರಘುರಾಮ್ ಭಟ್, ಡಿಪಿಸಿ ಎಸ್‍ಎಸ್‍ಕೆ ನಾರಾಯಣ ದೇಲಂಪಾಡಿ, ಜಂಟಿ ಸಂಚಾಲಕರು.ಕಾರಡೂಕ ಜಿವಿಎಚ್‍ಎಸ್‍ಎಸ್ ಎಚ್‍ಎಂ ಸಂಜೀವ, ಕಾರಡ್ಕ ಜಿವಿಎಚ್‍ಎಸ್ ಪ್ರಾಂಶುಪಾಲೆ ಮೀರಾ ಜೋಸ್ ಹಾಗೂ ಗಿ ಡಿಇಒ ದಿನೇಶ್ ಅವರನ್ನು ಆಯ್ಕೆ ಮಾಡಲಾಯಿತು.
ಹಣಕಾಸು, ಕಾರ್ಯಕ್ರಮ, ಆಹಾರ, ಸ್ವಾಗತ, ವೇದಿಕೆ ಮತ್ತು ಪ್ಯಾಂಟಲ್, ಬೆಳಕು ಮತ್ತು ಧ್ವನಿ ಮತ್ತು ಪ್ರಚಾರಕ್ಕಾಗಿ 15 ಉಪ ಸಮಿತಿಗಳನ್ನು ರಚಿಸಲಾಯಿತು.
ಕಾರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ, ವಕೀಲ ಗೋಪಾಲಕೃಷ್ಣ ಭಟ್, ಜಿಲ್ಲಾ ಪಂಚಾಯತ್ ವಿಭಾಗದ ಸದಸ್ಯ ಶಫೀಕ್, ಜಿಲ್ಲಾ ಪಂಚಾಯತ್ ಸದಸ್ಯ ಸಿ.ಜೆ.ಸಜಿತ್ ಮತ್ತಿತರರು ಭಾಗವಹಿಸಿದ್ದರು.ವಮುಖ್ಯಶಿಕ್ಷಕ ಎಂ.ಸಂಜೀವ ಸ್ವಾಗತಿಸಿದರು. ಸಿಬ್ಬಂದಿ ಕಾರ್ಯದರ್ಶಿ ಎಂ.ಪದ್ಮಕುಮಾರ್ ವಂದಿಸಿದರು.



