ಕಾಸರಗೋಡು: ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐಎಂಎ) ಕಾಸರಗೋಡು ಘಟಕದ ವಾರ್ಷಿಕ ಸಮಾವೇಶ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬೀರಂತಬೈಲಿನ ಐಎಣೆ ಸಭಾಂಗಣದಲ್ಲಿ ಜರುಗಿತು.
ಕಾಸರಗೋಡು ಶಾಖೆಯ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಐಎಂಎ ರಾಜ್ಯ ಸಮಿತಿ ಕಾರ್ಯದರ್ಶಿ ಡಾ. ಜೋಸೆಫ್ ಬೆನ್ನೆವನ್ ಸಮಾರಂಭ ಉದ್ಘಾಟಿಸಿದರು. ಐಎಂಎ ಕಾಸರಗೋಡು ಘಟಕ ಕಾರ್ಯದರ್ಶಿ ಡಾ, ಟಿ.ಖಾಸಿಂ ಅಧ್ಯಕ್ಷತೆ ವಹಿಸಿದ್ದರು. ಐಎಂಎ ಸ್ಟೇಟ್ ಎಥಿಕ್ಸ್ ಕಮಿಟಿ ಫಾರ್ ರಿಸರ್ಚ್ ಅಧ್ಯಕ್ಷ ಡಾ, ಸುಕುಮಾರ್ ವಾಸುದೇವನ್ ಮುಖ್ಯ ಅತಿಥಿ.ಯಾಗಿ ಭಾಗವಹಿಸಿದ್ದರು. ಡಾ, ಸುರೇಶ್ ಬಾಬು, ಡಾ, ಬಿ. ನಾರಾಯಣ ನಾಯ್ಕ್, ಡಾ, ಬಿ. ಎಸ್. ರಾವ್, ಡಾ.ಅನಂತ ಕಾಮತ್, ಡಾ.ಮಾಯಾ ಮಲ್ಯ ಉಪಸ್ಥಿತರಿದ್ದರು. ಐಎಂಎ ಕಾಸರಗೋಡು ಶಾಖೆಯ ಅಧ್ಯಕ್ಷ ಡಾ.ಗಣೇಶ್ ಮಯ್ಯ ಸ್ವಾಗತಿಸಿದರು. ಡಾ.ಪ್ರಜ್ಯೋತ್ ಎಸ್ ಶೆಟ್ಟಿ ವಂದಿಸಿದರು
ಐಎಂಎ ಕಾಸರಗೋಡು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಡಾ, ಎಂ. ಜಿತೇಂದ್ರ ರೈ ಅಧ್ಯಕ್ಷ, ಡಾ.ಪ್ರಜ್ಯೋತ್ ಎಸ್.ಶೆಟ್ಟಿ ಕಾರ್ಯದರ್ಶಿ ಹಾಗೂ ಡಾ.ಟಿ.ಖಾಸಿಂ ಅವರನ್ನು ಕೋಶಾಧಿಕಾರಿಯಾಗಿ ಅಧಿಕಾರ ವಹಿಸಿಕೊಮಡರು.





