HEALTH TIPS

ಕೊನೆಗೂ ತುಂಜತ್ ಎಝುತ್ತಚ್ಚನ್ ಪ್ರತಿಮೆ ಸ್ಥಾಪಿಸಲು ಸ್ಥಳ ನಿಗದಿ: ತಿರೂರ್ ನಲ್ಲಿ ನಿರ್ಮಿಸಲು ಕೋಝಿಕ್ಕೋಡ್ ಸಾಮೂದಿರಿ ಅರಸರ ಒಪ್ಪಿಗೆ

                  ತಿರೂರು: ಭಾಷಾಭಿಮಾನಿಗಳು ಮತ್ತು ಹಿಂದೂಗಳ ಸುದೀರ್ಘ ಪ್ರಾರ್ಥನೆ ಮತ್ತು ಕಾಯುವಿಕೆ ಅಂತ್ಯಗೊಂಡಿದೆ. ಕೋಝಿಕ್ಕೋಡ್‍ನ ಸಾಮೂದಿರಿ ರಾಜರು ಮಲಯಾಳಂ ಭಾಷೆಯ ಪಿತಾಮಹ ಮತ್ತು ಆಧ್ಯಾತ್ಮಿಕ ಗುರು ತುಂಜನ್ ಎಝುತ್ತಚ್ಚನ್ ಅವರ ಪ್ರತಿಮೆಯನ್ನು ತಿರೂರ್‍ನಲ್ಲಿ ಸ್ಥಾಪಿಸಲು ಅವಕಾಶ ಮಾಡಿಕೊಟ್ಟರು. ಸಾಮೂದಿರಿ ಅವರ ಆಪ್ತ ಕಾರ್ಯದರ್ಶಿ ಟಿ.ಆರ್.ರಾಮವರ್ಮ ಈ ಮಾಹಿತಿ ನೀಡಿದ್ದಾರೆ.

             ಎಝುತ್ತಚ್ಚನ್ ಪಾದಸ್ಪರ್ಶ ಮಾಡಿದ ತೃಕಂಡಿಯೂರು ಅಂಬಲಕುಳಂಗರ ದೇವಿಕ್ಷೇತ್ರಾಂಗಣದಲ್ಲಿ ಎಝುತ್ತಚಚನ್ ರ ಪ್ರತಿಮೆಯನ್ನು ಸ್ಥಾಪಿಸಲಾಗುವುದು. ಸನಾತನ ಧರ್ಮವೇದಿ ತಿರೂರ್ ಕಾರ್ಯಕರ್ತರ ಮಧ್ಯಸ್ಥಿಕೆಯಿಂದ ಸಾಮೂದಿರಿ ರಾಜಾ ಅವರು ತಿರೂರ್ ನಗರದ ಅಂಬಲಕುಲಂಗರ ದೇವಿಕ್ಷೇತ್ರಾಂಗಣದಲ್ಲಿ  ಪ್ರತಿಮೆಯನ್ನು ಸ್ಥಾಪಿಸಲು ಅವಕಾಶ ಮಾಡಿಕೊಟ್ಟರು. ತಿರೂರ್ ನಗರದಲ್ಲಿ ಪ್ರತಿಮೆ ಸ್ಥಾಪಿಸಲು ಮುನ್ಸಿಪಲ್ ಕೌನ್ಸಿಲ್ ಸಿದ್ಧವಾಗಿಲ್ಲದ ಕಾರಣ  ಎಂ.ಟಿ. ನೇತೃತ್ವದ ತುಂಚನ್ ಸ್ಮಾರಕ ಟ್ರಸ್ಟ್ ತುಂಚನ್ ಪರಂನಲ್ಲಿ ಪ್ರತಿಮೆಯನ್ನು ಸ್ಥಾಪಿಸಲು ಹಿಂದೇಟು ಹಾಕಿದ್ದರು. ಭಾಷಾಭಿಮಾನಿಗಳ ಪುನರಾವರ್ತಿತ ಮನವಿಯನ್ನು ಅವರೆಲ್ಲರೂ ನಿರ್ಲಕ್ಷಿಸಿದರು.

            ರೈಲ್ವೇ ಭೂಮಿಯಲ್ಲಿ ಎಝುತ್ತಚ್ಚನ್  ಪ್ರತಿಮೆ ಸ್ಥಾಪಿಸಲು ಪ್ರಯತ್ನಿಸಲಾಯಿತು, ಆದರೆ ಅದೂ ಕೈಗೂಡಲಿಲ್ಲ. ಈ ಹಂತದಲ್ಲಿ ಕೋಯಿಕ್ಕೋಡ್ ಸಾಮೂದಿರಿ ಕೋವಿಲಕಂ ಟ್ರಸ್ಟ್ ಒಡೆತನದ ದೇವಾಲಯದ ಪ್ರಾಂಗಣದಲ್ಲಿ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ರಾಜರು ತನ್ನ ಅನುಮತಿಯನ್ನು ನೀಡಿದ್ದು  ಈ ಕ್ರಮಕ್ಕೆ ದೇವಸ್ಥಾನದ ತಂತ್ರಿಯವರ ಅನುಮತಿಯೂ ಇದೆ.

             ಸನಾತನ ಧರ್ಮವೇದಿಕೆಯು ಪ್ರತಿಮೆ ಸ್ಥಾಪನೆಯ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿರುವುದಾಗಿ ಪ್ರಕಟಿಸಿದೆ. ಸನಾತನ ಧರ್ಮವೇದಿಯು ಒಂದು ದಶಕದಿಂದ ತಿರೂರ್ ಮೂಲದ ಆಧ್ಯಾತ್ಮಿಕ ಮತ್ತು ಸಾಂಸ್ಕøತಿಕ ಸಂಸ್ಥೆಯಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries