ತಿರುವನಂತಪುರಂ: ಸಣ್ಣ ಕಟ್ಟಡಗಳು ಮತ್ತು ಗೃಹಬಳಕೆಯ ಕಟ್ಟಡಗಳಿಗೆ ಇನ್ನು ಮುಂದೆ ವಿದ್ಯುತ್ ಸಂಪರ್ಕ ಪಡೆಯಲು ಸ್ವಾಧೀನ ಅಥವಾ ಹಕ್ಕುಪತ್ರ ಅಗತ್ಯವಿಲ್ಲ.
ಈ ಬಗ್ಗೆ ಸ್ವತಃ ಕೆಎಸ್ ಇಬಿ ಫೇಸ್ ಬುಕ್ ಮೂಲಕ ಮಾಹಿತಿ ನೀಡಿದೆ. ಈ ನಿಯಮವು 100 ಚದರ ಮೀಟರ್ (1076 ಚದರ ಅಡಿ) ಗಿಂತ ಕಡಿಮೆ ವಿಸ್ತೀರ್ಣ ಹೊಂದಿರುವ ಕಟ್ಟಡಗಳಿಗೆ ಅನ್ವಯಿಸುತ್ತದೆ.
ಕಟ್ಟಡದ ಒಟ್ಟು ವಿಸ್ತೀರ್ಣ 100 ಚದರ ಮೀಟರ್ ಗಿಂತ ಕಡಿಮೆಯಿದ್ದರೆ ಇದು ಅನ್ವಯ. ಅಧಿಕೃತವಾಗಿ ಅಗತ್ಯವಿರುವವರು ಕೆಎಸ್‍ಇಬಿ ಪ್ರಾಧಿಕಾರಕ್ಕೆ ಲಿಖಿತವಾಗಿ ವಿನಂತಿಸಿದರೆ ವಿದ್ಯುತ್ ಸಂಪರ್ಕವನ್ನು ಶಾಶ್ವತವಾಗಿ ಅಥವಾ ತಾತ್ಕಾಲಿಕವಾಗಿ ಕಡಿತಗೊಳಿಸಬಹುದು. ಅರ್ಜಿಯೊಂದಿಗೆ ಬಿಳಿ ಕಾಗದದಲ್ಲಿ ಬರೆದಿರುವ ಪ್ರಮಾಣ ಪತ್ರವನ್ನು ಮಾತ್ರ ಸಲ್ಲಿಸಿದರೆ ಸಾಕು ಎಂದು ಕೆಎಸ್ ಇಬಿ ಮಾಹಿತಿ ನೀಡಿದೆ.


