ಆಲಪ್ಪುಳ: ವಂದೇಭಾರತ್ ಎಕ್ಸ್‍ಪ್ರೆಸ್ ಮೊದಲ ಬಾರಿಗೆ ಚೆಂಗನ್ನೂರು ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಲಾಗಿದ್ದು ಅದ್ಧೂರಿ ಸ್ವಾಗತ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ ಮುರಳೀಧರನ್ ಮತ್ತಿತರರು ಭಾಗವಹಿಸಿದ್ದರು. ಚೆಂಗನ್ನೂರಿನಲ್ಲಿ ವಂದೇಭಾರತಕ್ಕೆ ನಿಲುಗಡೆಗೆ ಅವಕಾಶ ನೀಡಿರುವುದು ಅಯ್ಯಪ್ಪ ಭಕ್ತರಿಗೆ ಪ್ರಧಾನಿ ನೀಡಿದ ಕೊಡುಗೆಯಾಗಿದೆ ಎಂದು ವಿ ಮುರಳೀಧರನ್ ಹೇಳಿದ್ದಾರೆ.
ಕೇರಳದ ರೈಲ್ವೇ ಅಭಿವೃದ್ಧಿಯಲ್ಲಿ ನರೇಂದ್ರ ಮೋದಿ ಸರಕಾರ ಅಪ್ರತಿಮ ಕೊಡುಗೆ ನೀಡುತ್ತಿದೆ ಎಂದು ವಿ ಮುರಳೀಧರನ್ ಹೇಳಿದ್ದಾರೆ. ಚೆಂಗನ್ನೂರಿನಲ್ಲಿ ನಿಲುಗಡೆಗೆ ಅವಕಾಶ ನೀಡುವುದರೊಂದಿಗೆ, ರೈಲು ಹೊಸ ವೇಳಾಪಟ್ಟಿಯನ್ನು ಹೊಂದಿದೆ. ಹೊಸ ವೇಳಾಪಟ್ಟಿ ಜಾರಿಯಿಂದ ಇತರೆ ರೈಲುಗಳ ಸಂಚಾರಕ್ಕೆ ಆಗುವ ತೊಂದರೆ ಕಡಿಮೆಯಾಗಲಿದೆ ಎಂದರು.
ಅಕ್ಟೋಬರ್ 20 ರಿಂದ ಚೆಂಗನ್ನೂರಿನಲ್ಲಿ ವಂದೇಭಾರತ್ ನಿಲುಗಡೆಗೆ ಕೇಂದ್ರ ರೈಲ್ವೆ ಸಚಿವಾಲಯ ಅನುಮತಿ ನೀಡಿತ್ತು. ಇಂದಿನಿಂದಲೇ ಪರಿಷ್ಕøತ ವೇಳಾಪಟ್ಟಿ ಜಾರಿಯಲ್ಲಿದೆ.


