ತಿರುವನಂತಪುರಂ: ರಾಜ್ಯದಲ್ಲಿ ಪಡಿತರ ವಿತರಣಾ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಸುಧಾರಿಸಿದೆ. ವಿವಿಧ ವಿಭಾಗಗಳಿಗೆ ಎರಡು ಹಂತಗಳಲ್ಲಿ ಪಡಿತರ ನೀಡಲಾಗುವುದು.
ಆದ್ಯತಾ ವರ್ಗದ ಕಾರ್ಡ್‍ದಾರರಿಗೆ ಪ್ರತಿ ತಿಂಗಳು 15ನೇ ತಾರೀಖಿನ ಮೊದಲು ಹಾಗೂ ಸಾಮಾನ್ಯ ವರ್ಗದವರಿಗೆ 15ನೇ ತಾರೀಖಿನ ನಂತರ ವಿತರಣೆ ಮಾಡಲಾಗುವುದು. ಹೊಸ ಕ್ರಮವು ಇ-ಪಿಒಎಸ್ ಯಂತ್ರದೊಂದಿಗಿನ ಸಮಸ್ಯೆಯನ್ನು ಪರಿಹರಿಸುವ ಗುರಿಯನ್ನು ಹೊಂದಿದೆ ಮತ್ತು ತಿಂಗಳ ಕೊನೆಯಲ್ಲಿ ವಿಪರೀತ ಜನದಟ್ಟಣೆ ನಿಯಂತ್ರಿಸಲಿದೆ.
ಪ್ರಸ್ತುತ, ಪಡಿತರವನ್ನು ತಿಂಗಳ ಯಾವುದೇ ಸಮಯದಲ್ಲಿ ಖರೀದಿಸಬಹುದು ಎಂದಿತ್ತು. ಆದರೆ ಹೊಸ ವಿಧಾನ ಜಾರಿಯಿಂದ ಪಡಿತರ ನಷ್ಟವಾಗುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ಪಡಿತರ ವರ್ತಕರು. 15ರ ಮೊದಲು ಪಡಿತರ ಖರೀದಿಸದ ಆದ್ಯತಾ ವರ್ಗಕ್ಕೆ ಸೇರಿದವರಿಗೆ ನಂತರ ನೀಡುತ್ತಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.
ನಿರ್ಗತಿಕ, ಅನಾಥ ಮತ್ತು ವೃದ್ಧಾಶ್ರಮಗಳ ನಿವಾಸಿಗಳಿಗೆ ಎನ್.ಪಿ.ಐ. ಪಡಿತರ ಚೀಟಿ ಲಭ್ಯವಿದೆ. ಅವರ ಪಡಿತರ ವಿತರಣಾ ವಿಧಾನವನ್ನು ಸ್ಪಷ್ಟಪಡಿಸದಿರುವುದು ಗೊಂದಲಕ್ಕೆ ಕಾರಣವಾಗಿದೆ.

.webp)
