HEALTH TIPS

ವಿಶೇಷಚೇತನರಿಗಾಗಿ ಮುಂದಿನ ವರ್ಷ ಗೋವಾದಲ್ಲಿ ಅಂತರರಾಷ್ಟ್ರೀಯ ನೇರಳೆ ಉತ್ಸವ

               ಣಜಿ: 2024 ರ ಜನವರಿ 8 ರಿಂದ 13 ರವರೆಗೆ ವಿಶೇಷ ಚೇತನ ವ್ಯಕ್ತಿಗಳ ಪಾಲ್ಗೊಳ್ಳುವಿಕೆ ಮತ್ತು ಸಬಲೀಕರಣವನ್ನು ಆಚರಿಸುವ ಸಲುವಾಗಿ ಅಂತರರಾಷ್ಟ್ರೀಯ ನೇರಳೆ ಉತ್ಸವವನ್ನು (ಪರ್ಪಲ್ ಫೆಸ್ಟ್) ಗೋವಾ ರಾಜ್ಯ ಆಯೋಜಿಸಿದೆ.

              ಸೋಮವಾರ ಪಣಜಿಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಈ ವಿಷಯವನ್ನು ಘೋಷಿಸಿ, ಕಾರ್ಯಕ್ರಮ ಸಿದ್ದತೆಗಳ ಕುರಿತು ಮಾತನಾಡಿದ್ದಾರೆ.

             ವಿಶೇಷ ಚೇತನ ವ್ಯಕ್ತಿಗಳ ಸಬಲೀಕರಣವು ದಾನ ಧರ್ಮ ಮಾಡುವ ಕಾರ್ಯವಲ್ಲ. ಆದರೆ, ಮಾನವ ಹಕ್ಕುಗಳು ಮತ್ತು ಸಾಮಾಜಿಕ ಸಮಾನತೆಯನ್ನು ಉಳಿಸುವ ವಿಷಯವಾಗಿದೆ ಎಂದರು

            ಜನರ ಬೆಂಬಲ ಹಾಗೂ ಒಳಗೊಳ್ಳುವಿಕೆಯು ಈ ಸಮುದಾಯದ ಸುಧಾರಣೆಗೆ ಕೊಡುಗೆ ನೀಡಬಲ್ಲದು, ಈ ಮೂಲಕ ಅಸಂಖ್ಯಾತ ವ್ಯಕ್ತಿಗಳ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ನಾವು ನೋಡಬಹುದು ಎಂದು ಮುಖ್ಯಮಂತ್ರಿ ಹೇಳಿದರು,

              ಜನವರಿ 8 ರಿಂದ 13 ರವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಪಂಚದಾದ್ಯಂತದ ಜನರನ್ನು ಆಹ್ವಾನಿಸುತ್ತೇನೆ. ಈಗಾಗಲೇ ಗೋವಾ ರಾಜ್ಯವು ಜಿ 20 ಸಭೆಗಳು ಸೇರಿದಂತೆ ವಿವಿಧ ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

             ಈ ಸಂದರ್ಭದಲ್ಲಿ ಗೋವಾ ರಾಜ್ಯ ಸಮಾಜ ಕಲ್ಯಾಣ ಸಚಿವ ಸುಭಾಷ್ ದೇಸಾಯಿ ಇದ್ದರು. ಕಾರ್ಯಕ್ರಮದ ರೂಪುರೇಷೆಗಳನ್ನು ಶೀಘ್ರವೇ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries