ಕಾಸರಗೋಡು: ಅತಿಯಾದ ಮೊಬೈಲ್ ಬಳಕೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮಗನಿಂದ ಭೀಕರವಾಗಿ ಹಲ್ಲೆಗೆ ಒಳಗಾಗಿದ್ದ 63 ವರ್ಷದ ಮಹಿಳೆಯೊಬ್ಬರು ಕಣ್ಣೂರು ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
0
samarasasudhi
ಅಕ್ಟೋಬರ್ 14, 2023
ಕಾಸರಗೋಡು: ಅತಿಯಾದ ಮೊಬೈಲ್ ಬಳಕೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮಗನಿಂದ ಭೀಕರವಾಗಿ ಹಲ್ಲೆಗೆ ಒಳಗಾಗಿದ್ದ 63 ವರ್ಷದ ಮಹಿಳೆಯೊಬ್ಬರು ಕಣ್ಣೂರು ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯ ನೀಲೇಶ್ವರ ಕಣಿಚಿರ ಎಂಬ ಪ್ರದೇಶದ ರುಕ್ಮಣಿ ಎಂಬವರೇ ಮೃತರು.
ರುಕ್ಮಣಿ ಅವರ ತಲೆಯನ್ನು ಗೋಡೆಗೆ ಬಡಿದು ಪುತ್ರ ಸುಜಿತ್ ಗಾಯಗೊಳಿಸಿದ್ದ. ಪ್ರಕರಣ ನಡೆದ ಕೂಡಲೇ ಆತನ ಬಂಧನವೂ ಆಗಿತ್ತು.
ಅತಿಯಾಗಿ ಮೊಬೈಲ್ ಬಳಕೆ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ತಾಯಿಯ ಮೇಲೆ ಹಲ್ಲೆ ಮಾಡಿದೆ ಎಂದು ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದು, ಆತನನ್ನು ಕೋಯಿಕ್ಕೋಡ್‌ನ ಸರ್ಕಾರಿ ಮಾನಸಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.