ತಿರುವನಂತಪುರಂ: ರಾಜ್ಯದಲ್ಲಿ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕೀಟನಾಶಕಗಳ ಉಪಸ್ಥಿತಿಯು ಅನುಮತಿಸಲಾದ ಮಿತಿಗಿಂತ ಹೆಚ್ಚಾಗಿದೆ ಎಂದು ವರದಿಯಾಗಿದೆ.
ವಿವಿಧ ಮಾರುಕಟ್ಟೆಗಳು ಮತ್ತು ರೈತರಿಂದ ಸಂಗ್ರಹಿಸಲಾದ 72 ಹಣ್ಣು ಮತ್ತು ತರಕಾರಿ ಮಾದರಿಗಳಲ್ಲಿ 14 ರಲ್ಲಿ ಕೀಟನಾಶಕಗಳು ಕಂಡುಬಂದಿವೆ. ವೆಲ್ಲಯಾಣಿ ಕೃಷಿ ಕಾಲೇಜಿನ ಪ್ರಯೋಗಾಲಯದಲ್ಲಿ ವಿಷಯುಕ್ತ ಅಂಶ ಪತ್ತೆಯಾಗಿದೆ.
ಕೀಟನಾಶಕಗಳು ಮುಖ್ಯವಾಗಿ ಕರಿಬೇವಿನ ಎಲೆಗಳು, ಬಿಳಿಬದನೆ, ಸಲಾಡ್ ಸೌತೆಕಾಯಿಗಳು, ಪಡವಲಕಾಯಿ, ಬೀನ್ಸ್, ಕಪ್ಪು ದ್ರಾಕ್ಷಿ, ಸೇಬುಗಳು, ಬಾಜಿ ಮೆಣಸಿನಕಾಯಿಗಳು, ಕ್ಯಾಪ್ಸಿಕಂ, ಹಸಿರು ಮೆಣಸಿನಕಾಯಿ, ಗೋವಿನ ಜೋಳ ಮತ್ತು ಬೆಂಡಕಾಯಿಗಳಲ್ಲಿ ವಿಷಾ<ಶ ಕಂಡುಬಂದಿವೆ. ರಾಜ್ಯದಲ್ಲಿ ಹಣ್ಣು ಮತ್ತು ತರಕಾರಿ ಬೆಳೆಗಳಲ್ಲಿ ಕೀಟನಾಶಕಗಳ ಉಪಸ್ಥಿತಿಯನ್ನು ಪತ್ತೆಹಚ್ಚಲು ವೆಲ್ಲಯಾಣಿ ಕೃಷಿ ಕಾಲೇಜಿನಲ್ಲಿ ಲ್ಯಾಬ್ ಸ್ಥಾಪಿಸಲಾಗಿದೆ. ಕೃಷಿ ಅಭಿವೃದ್ಧಿ ಹಾಗೂ ರೈತರ ಕಲ್ಯಾಣ ಇಲಾಖೆಯ ಆರ್ಥಿಕ ನೆರವಿನೊಂದಿಗೆ ಪ್ರಯೋಗಾಲಯದಲ್ಲಿ ನಡೆಯುತ್ತಿರುವ ‘ಸೇಫ್ ಟು ಈಟ್’ ಯೋಜನೆಯ ಅಕ್ಟೋಬರ್ ತಿಂಗಳ ವರದಿಯಲ್ಲಿ ಈ ಅಂಶ ಸ್ಪಷ್ಟವಾಗಿದೆ.
ಆಹಾರ ಸುರಕ್ಷತಾ ಇಲಾಖೆಯ ಆಹಾರ ಸುರಕ್ಷತಾ ಅಧಿಕಾರಿಗಳ ಮೂಲಕ ಮಾದರಿ ಸಂಗ್ರಹಿಸಲಾಗಿದೆ. ಫಲಿತಾಂಶವನ್ನು ವೆಲ್ಲಯಾನಿ ಲ್ಯಾಬ್‍ನ ವೆಬ್‍ಸೈಟ್ ಠಿಡಿಡಿಚಿಟ.ಞಚಿu.iಟಿ ನಲ್ಲಿ ಪ್ರಕಟಿಸಲಾಗಿದೆ.


