ಬದಿಯಡ್ಕ: ಬದಿಯಡ್ಕ ಶ್ರೀ ವಿದ್ಯಾಪೀಠ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ಬಹುಮುಖ ಪ್ರತಿಭೆ ಶೇಯಾ ಟಿ. ಗೆ ದ.ಕ. ಕರ್ನಾಟಕ ರಾಜ್ಯೋತ್ಸವ ಸಾಧಕ ಪುರಸ್ಕಾರ ಲಭಿಸಿದೆ. ಈಕೆ ಪತ್ರಕರ್ತ ಕೆ.ಗಂಗಾಧರ್ ತೆಕ್ಕೆಮೂಲೆ ಹಾಗೂ ಪ್ರಿಯಾಂಕ ದಂಪತಿಯ ಪುತ್ರಿಯಾಗಿದ್ದಾಳೆ.
ಕರ್ನಾಟಕ ರಾಜ್ಯೋತ್ಸವ ದಿನ ನವೆಂಬರ್ 1 ರಂದು ಮಂಗಳೂರು ಶಾರದಾ ವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಸಾಧಕ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಎಸ್ ಪ್ರದೀಪ್ ಕುಮಾರ್ ಕಲ್ಕೂರ, ಡಾ. ಹರಿಕೃಷ್ಣ ಪುನರೂರು, ಪ್ರೊ. ಎಂ ಬಿ ಪುರಾಣಿಕ್, ಡಾ. ಇಂದಿರಾ ಹೆಗ್ಡೆ, ಡಾ. ಜ್ಯೋತಿ ಚೆಳ್ಯಾರ್, ಡಾ. ಅಣ್ಣಯ್ಯ ಕುಲಾಲ್, ಎ. ಆರ್. ಸುಬ್ಬಯ್ಯಕಟ್ಟೆ, ಖ್ಯಾತ ಕಲಾವಿದ ಉಳ್ಳಾಲ್ ಮೋಹನ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

-Shreya.jpg)
