ಬದಿಯಡ್ಕ: ಆಲ್ ಕೇರಳ ಲೈಸೆನ್ಸ್ಡ್ ವೈಯರ್ ಮೆನ್ಸ್ ಅಸೋಸಿಯೇಶನ್ ಬದಿಯಡ್ಕ ಘಟಕದ ಸಮ್ಮೇಳನ ಭಾನುವಾರ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಜರಗಿತು. ರಾಜ್ಯ ಉಪಾಧ್ಯಕ್ಷ ಬಾಬುರಾಜ್ ಉದ್ಘಾಟಿಸಿದರು. ಘಟಕದ ಅಧ್ಯಕ್ಷ ಭಾಸ್ಕರ ಪಿಲಾಂಕಟ್ಟೆ ಅಧ್ಯಕ್ಷತೆ ವಹಿಸಿದ್ದರು.
ಬದಿಯಡ್ಕ ವಿದ್ಯುತ್ ಇಲಾಖೆಯ ಸಹಾಯಕ ಇಂಜಿನಿಯರ್ ಪ್ರೇಮನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞÂ ಗುರುತಿನ ಚೀಟಿ ವಿತರಿಸಿದರು. ಜಿಲ್ಲಾ ಕಾರ್ಯದರ್ಶಿ ದಯಾನಂದನ್ ಸದಸ್ಯತ್ವ ನೀಡಿದರು. ರಾಜ್ಯ ಜಿಲ್ಲಾ ಮುಖಂಡರು ಪಾಲ್ಗೊಂಡಿದ್ದರು. ಘಟಕದ ಸದಸ್ಯರಿಂದ ಕಲಾ ಪ್ರದರ್ಶನ ನಡೆಯಿತು. ಘಟಕದ ಕಾರ್ಯದರ್ಶಿ ಅಶ್ರಫ್ ಎಂ.ಎಂ ಸ್ವಾಗತಿಸಿ, ವಿನು ವಿದ್ಯಾಗಿರಿ ವಂದಿಸಿದರು.

.jpg)
