ತಿರುವನಂತಪುರ: ರಾಜ್ಯ ಶಾಲಾ ಕಲೋತ್ಸವದಲ್ಲಿ ಮಾಂಸಾಹಾರಿ ಆಹಾರ ಇರುವುದಿಲ್ಲ ಎಂದು ಶಿಕ್ಷಣ ಸಚಿವ ವಿ.ಶಿವನ್‍ಕುಟ್ಟಿ ಹೇಳಿದ್ದಾರೆ.
ಈ ಬಾರಿಯೂ ಕಲೋತ್ಸವದಲ್ಲಿ ಕೇವಲ ಸಸ್ಯಾಹಾರವನ್ನೇ ನೀಡಲಾಗುವುದು, ಈ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಸಚಿವರು ಹೇಳಿದರು.
ಶಿವನ್‍ಕುಟ್ಟಿ ಅವರು ಕಲೋತ್ಸವದ ಆಹಾರದ ಬಗ್ಗೆ ತಮ್ಮ ನಿರ್ಧಾರವನ್ನು ಸಂಘಟನಾ ಸಮಿತಿ ಸಭೆಯಲ್ಲಿ ಪ್ರಕಟಿಸಿದರು.
ಕಳೆದ ಕಲೋತ್ಸವದಲ್ಲಿ ಮೋಹನನ್ ನಂಬೂದಿರಿಗೆ ಸಂಬಂಧಿಸಿದಂತೆ ಎದ್ದ ವಿವಾದಗಳ ನಂತರ, ಮುಂದಿನ ವರ್ಷದಿಂದ ಕಲೋತ್ಸವದಲ್ಲಿ ಮಾಂಸಾಹಾರಿ ಆಹಾರವನ್ನು ನೀಡಲಾಗುವುದು ಎಂದು ಸಚಿವ ಶಿವನಕುಟ್ಟಿ ಹೇಳಿದ್ದರು. ಇದೀಗ ಈ ವರ್ಷ ಏನಿರಲಿದೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಎಳೆದಿದ್ದಾರೆ.


