ಪತ್ತನಂತಿಟ್ಟ : ತಮಿಳುನಾಡಿನ ಇಬ್ಬರು ಶಬರಿಮಲೆ ಯಾತ್ರಿಕರು ಬುಧವಾರ ಪಂಪಾ ನದಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.
ಶಬರಿಮಲೆ: ಪಂಪಾ ನದಿಯಲ್ಲಿ ಮುಳುಗಿ ತಮಿಳುನಾಡಿನ ಇಬ್ಬರು ಯಾತ್ರಿಕರ ಸಾವು
0
ಡಿಸೆಂಬರ್ 28, 2023
Tags
0
samarasasudhi
ಡಿಸೆಂಬರ್ 28, 2023
ಪತ್ತನಂತಿಟ್ಟ : ತಮಿಳುನಾಡಿನ ಇಬ್ಬರು ಶಬರಿಮಲೆ ಯಾತ್ರಿಕರು ಬುಧವಾರ ಪಂಪಾ ನದಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.
ಚೆಂಗನ್ನೂರಿನ ಬಳಿ ಪಂಪಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಮೃತರು ಚೆನ್ನೈ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ.
22 ಯಾತ್ರಾರ್ಥಿಗಳ ಗುಂಪಿನಲ್ಲಿದ್ದ ಇವರು, ಶಬರಿಮಲೆಯ ಅಯ್ಯಪ್ಪನ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಇಂದು ರಾತ್ರಿ ರೈಲಿನಲ್ಲಿ ತಮ್ಮ ತವರು ರಾಜ್ಯಕ್ಕೆ ಮರಳುವ ಯೋಜನೆಯಲ್ಲಿದ್ದರು.
ಸ್ನಾನಕ್ಕೆ ತೆರಳಿದ್ದ ಒಬ್ಬ ವ್ಯಕ್ತಿ ನೀರಿನಲ್ಲಿ ಮುಳುಗಿದ್ದನು. ಆತನನ್ನು ರಕ್ಷಿಸಲು ಹೋದ ಮತ್ತೊಬ್ಬ ವ್ಯಕ್ತಿಯೂ ಆತನ ಜೊತೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.