ನವದೆಹಲಿ: ರಾಜ್ಯದಾದ್ಯಂತ ಸಾರ್ವಜನಿಕ ಪೂಜಾ ಸ್ಥಳಗಳ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ತಾನು ನೇಮಿಸಿರುವ ಸಮಿತಿಗೆ ಮಾಹಿತಿ ನೀಡುವಂತೆ ಸುಪ್ರಿಂ ಕೋರ್ಟ್, ಮಣಿಪುರ ಸರ್ಕಾರಕ್ಕೆ ಶುಕ್ರವಾರ ನಿರ್ದೇಶಿಸಿದೆ.
0
samarasasudhi
ಡಿಸೆಂಬರ್ 16, 2023
ನವದೆಹಲಿ: ರಾಜ್ಯದಾದ್ಯಂತ ಸಾರ್ವಜನಿಕ ಪೂಜಾ ಸ್ಥಳಗಳ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ತಾನು ನೇಮಿಸಿರುವ ಸಮಿತಿಗೆ ಮಾಹಿತಿ ನೀಡುವಂತೆ ಸುಪ್ರಿಂ ಕೋರ್ಟ್, ಮಣಿಪುರ ಸರ್ಕಾರಕ್ಕೆ ಶುಕ್ರವಾರ ನಿರ್ದೇಶಿಸಿದೆ.
ಜನಾಂಗೀಯ ಘರ್ಷಣೆಯ ವೇಳೆ ಹಾನಿಗೊಂಡಿರುವ ಅಥವಾ ನಾಶವಾಗಿರುವ ಪೂಜಾ ಸ್ಥಳಗಳ ಪಟ್ಟಿಯನ್ನು ಎರಡು ವಾರಗಳ ಒಳಗಾಗಿ ಸಿದ್ಧಪಡಿಸಿ ನ್ಯಾಯಮೂರ್ತಿ ಗೀತಾ ಮಿತ್ತಲ್ ನೇತೃತ್ವದ ಸಮಿತಿಗೆ ಒಪ್ಪಿಸುವಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ಹೇಳಿತು.