ಕಾಸರಗೋಡು: ಭಾರತೀಯ ರಾಜ್ಯ ಪಿಂಚಣಿದಾರರ ಮಹಾ ಸಂಘದ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಪೆನ್ಷನ್ ದಿನವನ್ನು ಆಚರಿಸಲಾಯಿತು. ಕಾಸರಗೋಡಿನ ಚಂದ್ರಗಿರಿ ದೇವಸ್ಥಾನ ವಠಾರದಲ್ಲಿ ನಡೆದ ಸಭೆಯನ್ನು ಸಂಘದ ಕೇರಳ ರಾಜ್ಯ ಸಮಿತಿ ಕಾರ್ಯದರ್ಶಿ ಸಿ. ಕೆ. ಉಮಾದೇವಿ ಉದ್ಘಾಟಿಸಿದರು.
ಸಂಘದ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಸಿ. ಎಚ್. ಸುರೇಶ ಪೆನ್ಷನ್ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಸಂಘದ ಜಿಲ್ಲಾ ಅಧ್ಯಕ್ಷ ಎಂ. ಬಾಲಕೃಷ್ಣ ಅಧ್ಯಕತೆ ವಹಿಸಿದರು.
ಚಂದು, ಸದಾನಂದ ಮಾಸ್ಟರ್, ಗೋಪಾಲನ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಸಿ. ಎಚ್. ಜಯೇಂದ್ರ ಸ್ವಾಗತಿಸಿದರು. ಎ. ಮುರಳೀಧರನ್ ವಂದಿಸಿದರು.





