ಕಾಸರಗೋಡು: ತಾಲೂಕು ನಾಯರ್ಸ್ ಸರ್ವೀಸ್ ಸೊಸೈಟಿ(ಎನ್‍ಎಸ್‍ಎಸ್)ಕರಯೋಗ ಒಕ್ಕೂಟ ವತಿಯಿಂದ ಶೈಕ್ಷಣಿಕ ಆರ್ಥಿಕ ನೆರವು, ಒಕ್ಕೂಟದ ವಿದ್ಯಾರ್ಥಿ ವೇತನ ಮತ್ತು ದತ್ತಿ ನಿಧಿ ವಿತರಣಾ ಸಮಾರಂಭ ಸಂಘಟನೆ ಕಾಸರಗೋಡು ಕಚೇರಿಯಲ್ಲಿ ಜರುಗಿತು.
ನಿವೃತ್ತ ಜಿಲ್ಲಾಧಿಕಾರಿ ಪಿ. ಕೆ. ಜಯಶ್ರೀ ಐಎಎಸ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಂಘ ಸಂಸ್ಥೆಗಳು ಸಮಾಜಮುಖಿ ಚಿಂತನೆಯೊಂದಿಗೆ ಕಾರ್ಯಪ್ರವೃತ್ತರಾದಾಗ ಇದು ಬದಲಾವಣೆಗೆ ಹಾದಿಮಾಡಿಕೊಡುವುದರ ಜತೆಗೆ ಬಡ ಜನತೆಯ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅನುಕೂಲವಾಗುವುದಾಘಿ ತಿಳಿಸಿದರು. ಈ ಸಂದರ್ಭ ವಿದ್ಯಾರ್ಥಿಗಳಿಗಿರುವ ಆರ್ಥಿಕ ಸಹಾಯ, ವಿದ್ಯಾರ್ಥಿ ವೇತನವನ್ನು ಪಿ.ಕೆ ಜಯಶ್ರೀ ವಿತರಿಸಿದರು. ಕಾಸರಗೋಡು ಡಿವೈಎಸ್ಪಿ ಪಿ. ಕೆ. ಸುಧಾಕರನ್ ಹಾಗೂ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸ್ಮಿತಾ ಬಾಲಕೃಷ್ಣನ್ ಉಪಸ್ಥಿತರಿದ್ದರು. ಒಕ್ಕೂಟದ ಉಪಾಧ್ಯಕ್ಷ ಸಿ. ಭಾಸ್ಕರನ್ ನಾಯರ್ ಸ್ವಾಗತಿಸಿದರು. ಸೇವಾಟ್ರಸ್ಟಿ ಯು. ರಾಜಗೋಪಾಲನ್ ವಂದಿಸಿದರು.




