ಕುಂಬಳೆ: ದೇಶವನ್ನು ಅಭಿಮಾನ ಪಡುವಂತೆ ಅಭಿವೃದ್ಧಿ ಮಾಡಿ ನಿಲ್ಲಿಸಿದ ಕಾಂಗ್ರೆಸ್ ಸಮಿತಿಯ ಅಂಗವಾಗುವುದು ಅದೊಂದು ಅಭಿಮಾನದ ವಿಷಯವೆಂದು ನೂತನ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರ್ತಿಕೇಯನ್ ಪೆರಿಯ ಅಭಿಪ್ರಾಯಪಟ್ಟರು.
ಮಂಜೇಶ್ವರ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಹೊಸ ಸಮಿತಿಗೆ ಜವಾಬ್ದಾರಿ ಹಸ್ತಾಂತರದ ಅಂಗವಾಗಿ ಅಧ್ಯಕ್ಷ ಜುನೈದ್ ಉರ್ಮಿ ಅವರಿಗೆ ಜವಾಬ್ದಾರಿಯನ್ನು ಹಸ್ತಾಂತರಿಸಿ ಅವರು ಮಾತನಾಡಿದರು.
ಮಂಜೇಶ್ವರ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ನಿಕಟಪೂರ್ವ ಉಪಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮೀಂಜ ಮಂಡಲ ಯುವ ಕಾಂಗ್ರೆಸ್ ಅಧ್ಯಕ್ಷ ಬಾತೀಷ್,ಮಂಗಲ್ಪಾಡಿ ಯುವ ಕಾಂಗ್ರೆಸ್ ಮಂಡಲ ಅಧ್ಯಕ್ಷ ಸಾಯಿ ಕರುಣ್, ಪೈವಳಿಕೆ ಯುವ ಕಾಂಗ್ರೆಸ್ ಮಂಡಲ ಅಧ್ಯಕ್ಷ ಶಾರುಣ್, ಪುತ್ತಿಗೆ ಯುವ ಕಾಂಗ್ರೆಸ್ ಮಂಡಲ ಅಧ್ಯಕ್ಷ ರಾಕಿಬ್ ಉಪಸ್ಥಿತರಿದ್ದರು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲೋಕನಾಧ್ ಶೆಟ್ಟಿ ಅವರು ನೂತನ ಚುನಾಯಿತ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕಾರ್ತಿಕೇಯನ್ ಪೆರಿಯ ಅವರಿಗೆ ಶಾಲು ಹೊದಿಸಿ ಅಭಿನಂದಿಸಿದರು. ಬಾಂಗ್ಲಾ ವಿಮೋಚನಾ ಸಮರ ವಿಜಯ ದಿನಾಚರಣೆಯ ಪ್ರಯುಕ್ತ ಆಗಿನ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿ ಮತ್ತು ಅಂದು ದೇಶದ ಸೈನ್ಯವನ್ನು ಮುನ್ನಡೆಸಿದ್ದ ಪೀಲ್ಡ್ ಮಾರ್ಷಲ್ ಮಾಣಿಕ್ ಶಾ ಮತ್ತು ಬಲಿದಾನಗೈದ ಅಸಂಖ್ಯಾತ ವೀರ ಯೋಧರ ಬಲಿದಾನವನ್ನು ನೆನೆದು ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಕುಂಬಳೆ ಯುವ ಕಾಂಗ್ರೆಸ್ ಮಂಡಲ ಅಧ್ಯಕ್ಷ ರಾಕೇಶ್ ರೈ ಕಿದೂರ್ ಸ್ವಾಗತಿಸಿದರು. ಮಂಜೇಶ್ವರ ಯುವ ಕಾಂಗ್ರೆಸ್ ನ ನೂತನ ಚುನಾಯಿತ ಸಮಿತಿಯ ಅಧ್ಯಕ್ಷರಾಗಿ ಜುನೈದ್ ಉರ್ಮಿ ಅವರು ಅಧ್ಯಕ್ಷನಾಗಿ ಸಮಿತಿಯ ಜವಾಬ್ದಾರಿ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.




.jpg)
