HEALTH TIPS

ಎಂಡೋ ವಂಚನೆ: ಕೇಂದ್ರತಂಡ ಇಂದು ಮಿಂಚಿಪದವಿಗೆ

                     ಮುಳ್ಳೇರಿಯ: ಕೇರಳದ ಪ್ಲಾಂಟೇಷನ್ ಕಾರ್ಪೋರೇಷನ್‍ನ ಗೋದಾಮುಗಳಲ್ಲಿ ಉಳಿದಿದ್ದ ಅತ್ಯಂತ ವಿಷಕಾರಕ ಕೀಟ ನಾಶಕ ಎಂಡೋಸಲ್ಫಾನ್‍ನ್ನು ಅಕ್ರಮವಾಗಿ ಹಾಗೂ ಅವೈಜ್ಞಾನಿಕವಾಗಿ ಕರ್ನಾಟಕದ ಗಡಿಭಾಗವಾದ ಕಾರಡ್ಕ ಸಮೀಪದ ಮಿಂಚಿನಪದವು ಗುಡ್ಡಗಾಡು ಪ್ರದೇಶದ ಪಾಳು ಬಾವಿಯಲ್ಲಿ ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‍ಜಿಟಿ) ದಕ್ಷಿಣದ ಚೆನ್ನೈ ಪೀಠವು ಕೇಂದ್ರ ಸÀರ್ಕಾರ, ಕರ್ನಾಟಕ ಮತ್ತು ಕೇರಳ ಸರ್ಕಾರ ಮತ್ತು ಕರ್ನಾಟಕ ಮತ್ತು ಕೇರಳದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಹಾಗೂ ಇತರರಿಗೆ ನೋಟೀಸು ಜಾರಿ ಮಾಡಿದ ಬೆನ್ನಿಗೇ ಕೇಂದ್ರ ತಂಡ ಇಂದು(ಗುರುವಾರ) ಮಿಂಚಿಪದವಿಗೆ ಭೇಟಿ ನೀಡಲಿದೆ.

                     ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ ಎಂಡೋಸಲ್ಫಾನ್ ಅನ್ನು ಕೈಬಿಟ್ಟ ಬಾವಿಗೆ ಎಸೆದ ಪ್ರಕರಣದಲ್ಲಿ ಆರೋಪಿಗಳು ಹಾಗೂ ಕೇರಳದ ಪ್ಲಾಂಟೇಶನ್ ಕಾಪೆರ್Çರೇಷನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ರವೀಂದ್ರನಾಥ್ ಶಾನಭೋಗ್ ಆಗ್ರಹಿಸಿದ್ದರು. 

            ಮಿಂಚಿಪದವಿನಲ್ಲಿ 2 ದಶಕಗಳಿಗೂ ಹೆಚ್ಚು ಕಾಲ ಕಾರ್ಪೋರೇಶನ್ ವ್ಯಾಪ್ತಿಯ ತೋಟಗಳಿಗೆ  ಎಂಡೋಸಲ್ಫಾನ್ ಸಿಂಪಡಿಸಿ ತೀವ್ರತರ ದೈಹಿಕ, ಮಾನಸಿಕ ತೊಂದರೆಗಳ ಸರಣಿ ವರದಿಗಳ ಅನುಸಾರ, ಪರಿಸರವಾದಿಗಳ ಪ್ರತಿಭಟನೆಯಿಂದಾಗಿ 2002ರಲ್ಲಿ ಸಂಪಡಣೆ ನಿಲ್ಲಿಸಲಾಗಿತ್ತು. ಎಂಡೋಸಲ್ಫಾನ್ ದುಷ್ಪÀರಿಣಾಮವಾಗಿ ಸ್ವರ್ಗ, ಪಡ್ರೆ, ಮಿಂಚಿಪದವು ಸಹಿತ ಬೆಳ್ಳೂರು, ಕುಂಬ್ಡಾಜೆ ಹಾಗೂ ಎಣ್ಮಕಜೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾವಿರಾರು ಕುಟುಂಬಗಳು ಶಾಶ್ವತ ಅನಾರೋಗ್ಯಕ್ಕೊಳಗಾಗಿ ಜಾಗತಿಕ ಸುದ್ದಿಯಾಗಿತ್ತು. 

        ವಿವಿಧ ಕಾನೂನು ಹೋರಾಟಗಳ ಪರಿಣಾಮ ಗೋದಾಮಿನಲ್ಲಿ ಇನ್ನೂ ಬಳಕೆಯಾಗದ ಎಂಡೋಸಲ್ಫಾನ್ ಪಾತ್ರೆಗಳನ್ನು ಸಂಪೂರ್ಣ ನಾಶಪಡಿಸಲು ನ್ಯಾಯಾಲಯ ನೀಡಿದ ಆದೇಶದ ತರುವಾಯ ಅಕ್ರಮವಾಗಿ ಯಾರ ಕಣ್ಣಿಗೂ ಕಾಣದಂತೆ ಬಾವಿಯಲ್ಲಿ ಠೇವಣಿ ಮಾಡಲಾಗಿದೆ ಎಂದು 2013 ಜೂನ್ ತಿಂಗಳಲ್ಲಿ ಬಹಿರಂಗಗೊಂಡಿತು. 

            ಕಾಸರಗೋಡು ಜಿಲ್ಲೆ ಹೊರತುಪಡಿಸಿ ದಕ್ಷಿಣ ಕನ್ನಡದ ನಾಲ್ಕು ತಾಲೂಕುಗಳಲ್ಲಿ ಎಂಡೋಸಲ್ಫಾನ್ ಗೆ ಬಲಿಯಾಗಿದ್ದಾರೆ ಎಂದು ಬಳಿಕ ತಿಳಿದುಬಂದಿದೆ. ನೆಟ್ಟಣಿಗೆ ಮುಡ್ನೂರು ಹಾಗೂ ಅಕ್ಕಪಕ್ಕದ ಗ್ರಾಮಗಳಾದ ಪಡವನ್ನೂರು ಮತ್ತು ಬಡಗನ್ನೂರಿನಲ್ಲಿ 36 ಪ್ರಕರಣಗಳು ವರದಿಯಾಗಿದೆ.

              ಈ ಗ್ರಾಮಗಳಲ್ಲಿ ಎಂಡೋಸಲ್ಫಾನ್ ಸಿಂಪರಣೆಯಾಗದ ಕಾರಣ ಕೇರಳದ ಮಿಂಚಿಪದವಿನಲ್ಲಿ ಅವೈಜ್ಞಾನಿಕವಾಗಿ ಎಸೆದ ಎಂಡೋಸಲ್ಫಾನ್ ದಕ್ಷಿಣ ಕನ್ನಡದ ಗ್ರಾಮಗಳ ಅಂತರ್ಜಲಕ್ಕೆ ಸೇರಿರಬಹುದು ಎಂದು ಆರೋಪಿಸಲಾಗಿದೆ.

          ಮಿಂಚಿಪದವು ಗುಡ್ಡಪ್ರದೇಶಗಳಲ್ಲಿ ಅವೈಜ್ಞಾನಿಕವಾಗಿ ಎಸಬಾವಿಯಿಂದ ಎಂಡೋಸಲ್ಫಾನ್ ಕಂಟೈನರ್‍ಗಳನ್ನು ಸುರಕ್ಷಿತವಾಗಿ ಹೊರತೆಗೆಯಲು ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂಬುದು ಹಸಿರು ನ್ಯಾಯಮಂಡಳಿಯಲ್ಲಿ ಡಾ.ರವೀಂದ್ರನಾಥ್ ಶಾನಭೋಗ್ ಅವರು ಬೇಡಿಕೆ ನೀಡಿದ್ದರು. ನೆಟ್ಟಣಿಗೆ ಗ್ರಾಮಕ್ಕೆ ಹೊಂದಿಕೊಂಡಿರುವ ಕರ್ನಾಟಕ-ಕೇರಳ ಗಡಿಭಾಗದ ಗ್ರಾಮಗಳಲ್ಲಿ ಅಂತರ್ಜಲ ವಿಶ್ಲೇಷಣೆ ನಡೆಸುವಂತೆ ಕೇರಳ ಮತ್ತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ನಿರ್ದೇಶನ ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು. 

            ನ್ಯಾಯಾಧಿಕರಣದ ಶಿಫಾರಸಿನ ಮೇರೆಗೆ ಕಳೆದ 20ರಂದು ನ್ಯಾಯಾಂಗ ಸದಸ್ಯೆ ಪುμÁ್ಪ ಸತ್ಯಣ್ಣ ಅವರನ್ನೊಳಗೊಂಡ ಹಸಿರು ನ್ಯಾಯಮಂಡಳಿಯ ದಕ್ಷಿಣ ವಲಯದ ಪೀಠ ಈ ಸ್ಥಳಕ್ಕೆ ಭೇಟಿ ನೀಡಿತ್ತು. ಪ್ರಕರಣದ ವಿಚಾರಣೆ ಜನವರಿ 2 ರಂದು ಮುಂದುವರಿಯಲಿದೆ. ಈ ಮಧ್ಯೆ ಇಂದು ಕೇಂದ್ರತಂಡ ಮಿಂಚಿಪದವಿಗೆ ಭೇಟಿ ನೀಡಲಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries