ಕಾಸರಗೋಡು: ಸ್ವೀಪ್ ಕೋರ್ ಕಮಿಟಿ ಸಭೆಯು ಕಾಸರಗೋಡು ಕಲೆಕ್ಟರೇಟ್ ವಿಡಿಯೋ ಕಾನ್ಫರೆನ್ಸ್ ಹಾಲ್‍ನಲ್ಲಿ ನಡೆಯಿತು. ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಚರಿಸಲಿರುವ ವೋಟ್ ಬಂಡಿ ಮುಂದಿನ ವಾರದಿಂದ ಜಿಲ್ಲೆಯಲ್ಲಿ ಪರ್ಯಟನೆ ನಡೆಸಲು ತೀರ್ಮಾನಿಸಲಾಯಿತು.
ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ ಕೈನಿಕ್ಕರ ಅಧ್ಯಕ್ಷತೆ ವಹಿಸಿದ್ದರು. ಸ್ವೀಪ್ ಜಿಲ್ಲಾ ನೋಡಲ್ ಆಫೀಸರ್ ಟಿ.ಟಿ.ಸುರೇಂದ್ರನ್ ಉಪಸ್ಥಿತರಿದ್ದರು. ಜನವರಿ 10ರೊಳಗೆ ಸ್ವೀಪ್ ಆಕ್ಷನ್ ಪ್ಲಾನ್ ತಯಾರಿಸಲು ತೀರ್ಮಾಣಿಸಲಾಯಿತು. ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನಾಚರಣೆಯಂದು ನಡೆಸಲಿರುವ ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.


