ಕಾಸರಗೋಡು: ಕೇರಳ ಸರ್ಕಾರಿ ದಾದಿಯರ ಸಂಘಟನೆ(ಕೆಜಿಎನ್‍ಎ)ಜಿಲ್ಲಾ ಸಮಿತಿ ವತಿಯಿಂದ ವಿವಿಧ ಬೇಡಿಕೆ ಮುಮದಿರಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿತು. ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಧರಣಿಯನ್ನು ಸಿಐಟಿಯು ಜಿಲ್ಲಾ ಸಮಿತಿ ಉಪಾಧ್ಯಕ್ಷ ವಿ.ಪಿ.ಪಿ ಮುಸ್ತಫಾ ಉದ್ಘಾಟಿಸಿದರು.
ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷೆ ಹಫ್ಸತ್ ಬಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಅನೀಶ್ ಪಿ.ವಿ ಸ್ವಾಗತಿಸಿದರು. ಸಂಘಟನೆ ರಾಜ್ಯ ಸಮಿತಿ ಸದಸ್ಯೆ ಜಲಜಾ ಕೆ.ಕೆ ವಂದಿಸಿದರು. ಕೆಜಿಎನ್‍ಎ ರಾಜ್ಯ ಸಮಿತಿ ಸದಸ್ಯ ಪಿ.ವಿ.ಪವಿತ್ರನ್ ಉಪಸ್ಥೀತರಿದ್ದರು. ಎ ಶೀಜಾ, ನಿಮೇಶ್ ಬಾಬು ಕೆವಿ ಮತ್ತು ಪ್ರಸೀನಾ ಮೆರವಣಿಗೆಯ ನೇತೃತ್ವ ವಹಿಸಿದ್ದರು.
ತುಟ್ಟಿ ಭತ್ಯೆಯ ಬಾಕಿ ಅನುದಾನ ಮಂಜೂರುಗೊಳಿಸಬೇಕು, ಕೇರಳಕ್ಕೆ ಕೇಂದ್ರ ಸರ್ಕಾರ ಕಡಿತಗೊಳಿಸಿದ ಹಣಕಾಸಿನ ನೆರವು ಪುನ:ಸ್ಥಾಪಿಸಬೇಕು, ಪಿಎಫ್‍ಆರ್‍ಡಿಎ ಕಾಯ್ದೆ ರದ್ದುಗೊಳಿಸಬೇಕು, ಸಹಭಾಗಿತ್ವದ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಬೇಕು, ರೋಗಿಗಳ ಸಂಖ್ಯೆಗೆ ಅನುಗುಣವಾಗಿ ದಾದಿಯರು ಮತ್ತು ಸಿಬ್ಬಂದಿ ಹುದ್ದೆಗಳನ್ನು ಪುನಾರಚಿಸಬೇಕು ಮುಂತಾದ ಬೇಡಿಕೆ ಮುಂದಿರಿಸಿ ಧರಣಿ ಆಯೋಜಿಸಲಾಗಿತ್ತು.

