ತಿರುವನಂತಪುರಂ: ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಿದವರಿಗೆ ಇನ್ನು ಕಷ್ಟಕಾಲ ಕಾದಿದೆ. ನಾಳೆಯಿಂದ ಚಾಲನಾ ಪರೀಕ್ಷಾ ಕೇಂದ್ರಗಳಲ್ಲಿ 50 ಮಂದಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿದೆ.
ಇಂದು ನಡೆದ ಆರ್‍ಟಿಒಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ನಿರ್ದೇಶನ ನೀಡಿದ್ದಾರೆ.
ಪ್ರಸ್ತುತ, ದಿನಕ್ಕೆ 150 ಜನರನ್ನು ಪರೀಕ್ಷಿಸಲಾಗುತ್ತಿದೆ. ಇದನ್ನು 50ಕ್ಕೆ ಇಳಿಸಲಾಗಿದೆ. ಆದರೆ ಅರ್ಜಿದಾರರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಎಂಬುದನ್ನು ಮೋಟಾರು ವಾಹನ ಇಲಾಖೆ ಇನ್ನೂ ಸ್ಪಷ್ಟಪಡಿಸಿಲ್ಲ.
ನಿನ್ನೆ ಈ ಬಗ್ಗೆ ಚಾಲನಾ ಪರೀಕ್ಷೆಯನ್ನು ಮಾರ್ಪಾಡು ಮಾಡಿ ಆದೇಶ ಹೊರಡಿಸಲಾಗಿತ್ತು. ಬದಲಾವಣೆಗಳು ಮೇ 1 ರಿಂದ ಜಾರಿಗೆ ಬರಲಿವೆ. ಪರಿಷ್ಕøತ ಪರೀಕ್ಷೆಯು ಹಲವಾರು ಬದಲಾವಣೆಗಳನ್ನು ಹೊಂದಿದೆ, ಉದಾಹರಣೆಗೆ ಡ್ರೈವಿಂಗ್ ಟೆಸ್ಟ್‍ಗೆ ಬಳಸುವ ವಾಹನವು ಪರೀಕ್ಷೆಯನ್ನು ದಾಖಲಿಸಲು ಡ್ಯಾಶ್‍ಬೋರ್ಡ್ ಕ್ಯಾಮೆರಾವನ್ನು ಅಳವಡಿಸಬೇಕು ಎಂಬಿತ್ಯಾದಿಗಳಿವೆ.


