ಪದ್ಮಜಾ ವೇಣುಗೋಪಾಲ್ ಅವರು ಬಿಜೆಪಿಗೆ ಸೇರ್ಪಡೆಗೊಳ್ಳಲು ಕಾರಣ ಕಾಂಗ್ರೆಸ್ ಎಂದು ಸ್ವತಃ ಹೇಳಿ ಮತ್ತೊಂದು ಅಚ್ಚರಿ ಮೂಡಿಸಿದ್ದಾರೆ. ಪಕ್ಷಕ್ಕೆ ಒಬ್ಬ ಒಳ್ಳೆಯ ನಾಯಕ ಬೇಕು ಎಂದಿರುವರು.
ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಕಾಣುವ ನಾಯಕತ್ವ ಕೌಶಲ್ಯದಿಂದ ಪ್ರಭಾವಿತಳಾಗಿರುವೆ. ಇದೇ ತನ್ನನ್ನು ಬಿಜೆಪಿಗೆ ಕರೆತಂದಿದೆ. ತಾನು ಯಾವುದೇ ಆಶೆಗಳಿಲ್ಲದೆ ಬಿಜೆಪಿಗೆ ತೆರಳುತ್ತಿರುವೆ. ಸುಮ್ಮನೆ ಮನಃಶಾಂತಿಯಿಂದ ಕೆಲಸ ಮಾಡಬೇಕು. ಅದು ಎಲ್ಲಿ ಸಿಗುತ್ತದೆ ಎಂದು ನೋಡುತ್ತಿದ್ದೇನೆ ಎಂದು ಪದ್ಮಜಾ ಹೇಳಿದರು.
"ಇದು ಮೋಸವಲ್ಲ, ಮನಸ್ಸಿಗೆ ನೋವಾಗಿದೆ, ಅವರು(ಕಾಂಗ್ರೆಸ್ಸ್) ನನ್ನನ್ನು ಈ ಹಂತಕ್ಕೆ ತಂದಿದ್ದಾರೆ, ನನಗೆ ಯಾರ ಬಳಿಯೂ ದೂರು ಇಲ್ಲ, ಯಾರು ಏನು ಬೇಕಾದರೂ ಹೇಳಬಹುದು, ಯಾವುದೇ ಸಮಸ್ಯೆ ಅಥವಾ ದೂರು ಇಲ್ಲ, ನಾನು ಪಕ್ಷದಿಂದ ದೂರ ಉಳಿದಿದ್ದೇನೆ. ಕಳೆದ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದವರು ಯಾರು ಎಂಬುದು ನನಗೆ ಗೊತ್ತು.ಆದರೆ ನಾನು ಯಾರಿಗೂ ಹೇಳಲು ನಿಂತಿಲ್ಲ.ದೂರು ನೀಡಿದ್ದರೂ ನಂತರ ಪಕ್ಷದವರು ಅದರ ಬಗ್ಗೆ ಗಮನ ಹರಿಸಲಿಲ್ಲ.ಆರೋಪಿಗಳನ್ನು ನಾಯಕತ್ವದಿಂದ ನನ್ನ ಮೂಗಿನ ನೇರಕ್ಕೆ ತರಲಾಯಿತು. ನನಗೆ ಸಹಿಸಲಾಗದಷ್ಟು ತುಂಬಾ ನೋವಾಗಿದೆ.ಹಾಗಾಗಿ ನಾನು ದೀರ್ಘಕಾಲ ಅದರ ಬಗ್ಗೆ ಏನನ್ನೂ ಮಾತನಾಡಿಲ್ಲ.
ನನ್ನ ತಂದೆ(ಕೆ.ಕರುಣಾಕರನ್) ಎಷ್ಟು ದುಃಖದಿಂದ ಭೂಮಿಯನ್ನು ತೊರೆದರು ಎಂದು ನನಗೆ ತಿಳಿದಿದೆ. ಅದನ್ನು ಹೇಳುವ ಹಕ್ಕು ನನಗಷ್ಟೇ ಇದೆ.ಸಹೋದರ ಮುರಳೀಧರನ್ ನನ್ನೊಂದಿಗೆ 2005 ರಿಂದ ಸೇರಿಕೊಂಡರು. ಮುರಳೀಧರನ್ ಅವರು ತಂದೆಯವರು ಬದುಕಿದ್ದಾಗ ರಾಜಕೀಯದ ಬಗ್ಗೆ ಯಾವುದೇ ಆಸಕ್ತಿ ತೋರಿಸದ ವ್ಯಕ್ತಿ. ಕೇರಳದ ಜನತೆಗೆ ಆತ ಏನು ಮಾಡಿದ್ದಾನೆ, ತಂದೆಯನ್ನು ಹೇಗೆ ನಡೆಸಿಕೊಂಡಿದ್ದಾನೆ ಎಂಬುದು ಗೊತ್ತಿದೆ. ಅದಕ್ಕೆ ನಾನು ಅವನಿಗೆ ಉತ್ತರಿಸಬೇಕಾಗಿಲ್ಲ. ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡಿದಾಗ ಈ ಸಹಾನುಭೂತಿ ಇರಲಿಲ್ಲ. ಮುರಳೀಧರನ್ ಒಂದು ನೆನಪಿಡಬೇಕು ಎಲ್ಲವನ್ನೂ ಸರಿಪಡಿಸುವ ಕಾಲ ಬರಲಿದೆ,’’ ಎಂದು ಪದ್ಮಜಾ ಹೇಳಿರುವರು.


