ತಿರುವನಂತಪುರಂ: ‘ಭಯದಿಂದ ಶ್ರೀಗಂಧದ ತಿಲಕ ಮುಟ್ಟಿಲ್ಲ’ ಎಂದು ಪದ್ಮಜಾ ವೇಣುಗೋಪಾಲ್ ಅವರು ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದು, ಕೇರಳ ಎಲ್ಲಿಗೆ ಬಂದಿದೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.
ಮಲಯಾಳಂ ಮಾಸದ ಮೊದಲ ದಿನ ಗುರುವಾಯೂರಿಗೆ ತೆರಳಿ ಕಣ್ಣನ್‍ನ (ಗುರುವಾಯೂರಪ್ಪನ್) ದರ್ಶನ ಪಡೆದ ನೈಜ ನಾಯಕ ಕೆ ಕರುಣಾಕರನ್ ಅವರ ಪುತ್ರಿ ಹೀಗೆ ಹೇಳಿರುವುದು ಕುತೂಹಲ ಮೂಡಿಸಿದೆ.
ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೇ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪದ್ಮಜಾ ಅವರು ನಿರ್ಭಯವಾಗಿ ಇನ್ನು ಹಣೆಗೆ ಶ್ರೀಗಂಧ ಧರಿಸಬಹುದು ಎಂದು ಸಮಾಧಾನ ವ್ಯಕ್ತಪಡಿಸಿದರು.
"ನಾನು ಶ್ರೀಗಂಧವನ್ನು ಸ್ಪರ್ಶಿಸಲು ಇಷ್ಟಪಡುವ ವ್ಯಕ್ತಿ. ಆದರೆ ಅದನ್ನು ಮುಟ್ಟಿದರೆ ಕಾಂಗ್ರೆಸ್ ಕಾರ್ಯಕರ್ತರು ತಕ್ಷಣ ನನ್ನ ಮುಖ ನೋಡುತ್ತಾರೆ. ಹಾಗಾಗಿ ಮುಟ್ಟಿದ ತಕ್ಷಣ ಒಳಗೆ ಹೋಗಿ ಒರೆಸಿ ಹೊರಗೆ ಬಾ' ಎನ್ನಲಾಗುತ್ತಿತ್ತು. ಒಂದು ಕಾಲದಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ದೇಶವನ್ನು ಆಳಿದ ಕಾಂಗ್ರೆಸ್ ಯಾರಿಗೆ ಹೆದರುತ್ತಾರೆ ಎಂಬ ಪ್ರಶ್ನೆಗೆ ಇದೇ ಉತ್ತರ.
ಕಾಂಗ್ರೆಸ್ ನಾಯಕ ಉಣ್ಣಿತ್ತಾನ್ ಅವರು ತಮ್ಮ ಯೌವನದಿಂದ ಅನುಸರಿಸಿದ್ದ ವಿಧಾನವನ್ನು ಏಕಾಏಕಿ ಅಳಿಸಿದ್ದು ಈ ಹಿಂದೆ ವಿವಾದಕ್ಕೀಡಾಗಿತ್ತು. ಕಾಸರಗೋಡಿನಲ್ಲಿ ಸ್ಪರ್ಧಿಸಲು ಬಂದಿದ್ದ ಸಂದರ್ಭ ಅವರು ತಿಲಕದಿಂದ ಪೂರ್ಣ ಹೊರಬಂದಿದ್ದರು.
ಕೊಟ್ಟಾರಕ್ಕರ ಮಹಾಗಣಪತಿಯ ಕಪ್ಪು ತಿಲಕದಿಂದ ಅಲಂಕೃತಗೊಂಡ ಸುಂದರ ಮುಖದ ಉಣ್ಣಿತ್ತಾನ್ ನನ್ನು ಕೇರಳ ತನ್ನ ವಿದ್ಯಾರ್ಥಿ ದಿನಗಳಿಂದಲೂ ನೋಡಿದೆ. 2019ರ ಏಪ್ರಿಲ್‍ನಿಂದ ನಾವು ಆ ತಿಲಕವನ್ನು ಏಕೆ ನೋಡಿಲ್ಲ ಎಂಬ ಪ್ರಶ್ನೆಗೂ ಪದ್ಮಜಾ ಅವರ ಮಾತುಗಳೇ ಉತ್ತರ.
ಮೃದು ಹಿಂದುತ್ವದ, ದೇವಾಲಯಕಕೆ ತೆರಳುವ, ತಿಲಕವಿರಿಸುವವರನ್ನು ಕಾಂಗ್ರೆಸ್ ದೂರ ಮಾಡಬಾರದು ಎಂಬ ಎ.ಕೆ.ಆಂಟನಿ ಅವರ ಇತ್ತೀಚಿನ ಹೇಳಿಕೆಯನ್ನೂ ಓದಲೇಬೇಕು ಎಮದು ಪದ್ಮಜಾ ನೆನಪಿಸಿದರು.


