ರಿಯಾದ್: ಸೌದಿ ಅರೇಬಿಯಾದಲ್ಲಿ ಅಮಾವಾಸ್ಯೆ ಬಳಿಕದ ಮೊದಲ ಚಂದ್ರ ಕಾಣಿಸಿಕೊಂಡಿದ್ದು, ಒಮಾನ್ ಹೊರತುಪಡಿಸಿ ಗಲ್ಫ್ ರಾಷ್ಟ್ರಗಳಲ್ಲಿ ಸೋಮವಾರ (ಇಂದು)ರಂಜಾನ್ ಉಪವಾಸ ಆರಂಭವಾಗಿದೆ.
ಕೇರಳ ಹಿಲಾಲ್ ಸಮಿತಿ ಅಧ್ಯಕ್ಷ ಎಂ. ಮುಹಮ್ಮದ್ ಮದನಿ ಈ ಬಗ್ಗೆ ಮಾಹಿತಿ ನೀಡಿ ಕೇರಳದಲ್ಲಿ ನಾಳೆಯಿಂದ(ಮಂಗಳವಾರ) ಉಪವಾಸ ಆರಂಭವಾಗಲಿದೆ ಎಂದು ತಿಳಿಸಿರುವರು.
ಒಮಾನ್‍ನಲ್ಲಿ ಮಂಗಳವಾರ ಉಪವಾಸ ಪ್ರಾರಂಭವಾಗುತ್ತದೆ. ಇದನ್ನು ಔಕಾಫ್ ಧಾರ್ಮಿಕ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ.
ಧಾರ್ಮಿಕ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ, ಓಮನ್‍ನ ವಿವಿಧ ಭಾಗಗಳಲ್ಲಿ ಅಮಾವಾಸ್ಯೆಯನ್ನು ವೀಕ್ಷಿಸಲು ವ್ಯವಸ್ಥೆಯನ್ನು ಸ್ಥಾಪಿಸಲಾಯಿತು.


