ಪೆರ್ಲ: ಕಾಟುಕುಕ್ಕೆ ಶ್ರೀ ಸಉಬ್ರಾಯ ದೇವಸ್ಥಾನದಲ್ಲಿ ಪ್ರತಿಷ್ಟಾ ದಿನ ವಾರ್ಷಿಕೋತ್ಸವ, ಶುದ್ಧಿಕಲಶ ಹಾಗೂ ನೂತನ ಚಂದ್ರಮಂಡಲ ರಥ ಸಮರ್ಪಣಾ ಸಮಾರಂಭ ಏ. 2ರಂದು ಜರುಗಲಿದೆ.
ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ನೇತೃತ್ವ ವಹಿಸುವರು. ರಥಸಮರ್ಪಣಾ ಕಾರ್ಯಕ್ರಮದ ಅಂಗವಾಗಿ ಮಾ. 31ರಂದು ಸಂಜೆ 4ಕ್ಕೆ ಅಡ್ಕಸ್ಥಳದಿಂದ ಕಾಟುಕುಕ್ಕೆ ದೇವಸ್ಥಾನ ವರೆಗೆ ಚಂದ್ರಮಂಡಲ ರಥದ ಭವ್ಯ ಶೋಭಾಯಾತ್ರೆ ನಡೆಯಲಿದೆ.
ಏ. 1ರಂದು ಸಂಜೆ 7.30ಕ್ಕೆ ರಾಕ್ಷೋಘ್ನ ಹೋಮ, ವಾಸ್ತುಬಲಿ, ನೂತನ ಚಂದ್ರಮಂಡಲ ರಥ ಪರಿಗ್ರಹಣ, ಏ. 2ರಂದು ಬೆಳಗ್ಗೆ 7.30ರಿಂದ ಉಷ:ಪೂಜೆ, 108 ಕಾಯಿ ಗಣಪತಿ ಹೋಮ, ಬಲಿವಾಡು ಕೂಟ, ಶತರುದ್ರಾಭಿಷೇಕ, ಕಲಶಾಭಿಷೇಕ, ತುಲಾಭಾರ ಸೇವೆ ನಡೆಯುವುದು. ಸಂಜೆ 7.30ಕ್ಕೆ ರಂಗಪೂಜೆ, ರಾತ್ರಿ 9ಕ್ಕೆ ಶ್ರೀದೇವರ ಬಲಿ ಉತ್ಸವ, ಭೂತಬಲಿ, ಬೆಡಿ, ಪಲ್ಲಕ್ಕಿ ಉತ್ಸವ, ಶ್ರೀದೇವರ ವೈಭವದ ರಥೋತ್ಸವ, ದರ್ಶನಬಲಿ, ಬಟ್ಟಲುಕಾಣಿಕೆ ನಡೆಯುವುದು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಊರ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ 'ಜಾನಪದ ಸಿರಿ ಕದಿಕೆ'ಬಿರುದಾಂಕಿತ ಕೆ.ವಿ ಶೆಟ್ಟಿ ಮಂಗಳೂರು ರಚಿಸಿ, ನಿರ್ದೇಶಿಸಿರುವ 'ನಾಗಬನ'ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳುವುದು.



