ಕೊಚ್ಚಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಳಮಶ್ಷೇರಿ ಎಚ್‍ಎಂಟಿ ಬಳಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಕೊಚ್ಚಿ ಘಟಕದ ಸ್ವಂತ ಕಚೇರಿ ಸಂಕೀರ್ಣವನ್ನು ಆನ್‍ಲೈನ್‍ನಲ್ಲಿ ಉದ್ಘಾಟಿಸಿದರು.
ಹೊಸ ಕಚೇರಿಯು ದಕ್ಷಿಣ ಭಾರತದಲ್ಲಿ ತನಿಖೆಗಳು, ಗುಪ್ತಚರ ಮತ್ತು ಸೈಬರ್ ಭದ್ರತೆಯನ್ನು ಸಂಯೋಜಿಸಲು ಬಲನೀಡಲಿದೆ.
ಎನ್ಐಎ ದಕ್ಷಿಣ ಭಾರತ ಮುಖ್ಯಸ್ಥ ಐಜಿ ಸಂತೋಷ್ ರಸ್ತೋಗಿ, ಡಿಐಜಿ ಕಾಳಿರಾಜ್ ಮಹೇಶ್, ಕೊಚ್ಚಿ ಘಟಕದ ಎಸ್ಪಿ ವಿಷ್ಣು ಎಸ್. ವಾರಿಯರ್ ಮತ್ತಿತರರು ಕಳಮಶ್ಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೆಲವೇ ದಿನಗಳಲ್ಲಿ ಹೊಸ ಕಚೇರಿಗೆ ಕಾರ್ಯಾಚರಣೆ ಸ್ಥಳಾಂತರಗೊಳ್ಳಲಿದೆ. ಪ್ರಸ್ತುತ ಕಡವಂತರ ಗಿರಿನಗರದ ಬಾಡಿಗೆ ಕಟ್ಟಡದಲ್ಲಿ ಎನ್‍ಐಎ ಕಚೇರಿ ಕಾರ್ಯನಿರ್ವಹಿಸುತ್ತಿದೆ.
ಕೊಚ್ಚಿ ಕಛೇರಿಯ ವ್ಯಾಪ್ತಿ ಕೇರಳ ಮತ್ತು ಲಕ್ಷದ್ವೀಪವಾಗಿದೆ. ಮೂರು ಎಕರೆ ಜಾಗದಲ್ಲಿ ಮುಖ್ಯ ಕಚೇರಿಯಲ್ಲದೆ ಬ್ಯಾರಕ್, ಸಮುದಾಯ ಭವನ, ವಸತಿ ಸಮುಚ್ಚಯ, ವಿಧಿವಿಜ್ಞಾನ ಪ್ರಯೋಗಾಲಯದಂತಹ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.


