ಕೊಚ್ಚಿ: ಪೆಟ್ರೋಲ್ ಮತ್ತು ಡೀಸೆಲ್ ಪರಿಷ್ಕøತ ಬೆಲೆಗಳು ಜಾರಿಗೆ ಬಂದಿವೆ. ಇಂದು ಬೆಳಿಗ್ಗೆ ಆರು ಗಂಟೆಯಿಂದ ಹೊಸ ಬೆಲೆ ಜಾರಿಗೆ ಬಂದಿದೆ. ಕೊಚ್ಚಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 105 ರೂ 50 ಪೈಸೆ ಮತ್ತು ಡೀಸೆಲ್ ಬೆಲೆ 94 ರೂ 50 ಪೈಸೆ ಇದೆ.
ಎರಡು ವರ್ಷಗಳ ನಂತರ ದೇಶದಲ್ಲಿ ಇಂಧನ ಬೆಲೆ ಇಳಿಕೆಯಾಗುತ್ತಿದೆ.
ಕೇಂದ್ರ ಸರ್ಕಾರ ನಿನ್ನೆ ರಾತ್ರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‍ಗೆ 2 ರೂ.ಇಳಿಸಿತ್ತು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಿಂದ 58 ಲಕ್ಷ ಸರಕು ವಾಹನಗಳು, 6 ಕೋಟಿ ಕಾರುಗಳು ಮತ್ತು 27 ಕೋಟಿ ದ್ವಿಚಕ್ರ ವಾಹನಗಳ ನಿರ್ವಹಣಾ ವೆಚ್ಚ ಕಡಿಮೆಯಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಕಳೆದ ಮಹಿಳಾ ದಿನದಂದು ಗೃಹಬಳಕೆಯ ಅಡುಗೆ ಅನಿಲವನ್ನು ರೂ.100 ಇಳಿಸಿತ್ತು. ಬೆಲೆ ಏರಿಕೆಯನ್ನು ಪ್ರತಿಪಕ್ಷಗಳು ಚುನಾವಣೆಯಲ್ಲಿ ಅಸ್ತ್ರವಾಗಿ ಬಳಸುವುದನ್ನು ತಡೆಯುವುದು ಸರ್ಕಾರದ ಉದ್ದೇಶವಾಗಿದೆ. ಬೆಲೆ ಇಳಿಕೆಯಿಂದ ಜನ ಸಾಮಾನ್ಯರಿಗೆ ದೊಡ್ಡ ಸಮಾಧಾನವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಜಿಲ್ಲಾವಾರು ಪೆಟ್ರೋಲ್ ಡೀಸೆಲ್ ಬೆಲೆ
ಜಿಲ್ಲೆ ಪೆಟ್ರೋಲ್ ಡೀಸೆಲ್
ಆಲಪ್ಪುಳ 106.2 95.09
ಎರ್ನಾಕುಲಂ 105.98 94.88
ಇಡುಕ್ಕಿ 106.02 94.93
ಕಣ್ಣೂರು 106 94.93
ಕಾಸರಗೋಡು 106.39 95.29
ಕೊಲ್ಲಂ 107.23 96.06
ಕೊಟ್ಟಾಯಂ 106.2 95.09
ಕೋಝಿಕ್ಕೋಡ್ 106.33 95.24
ಮಲಪ್ಪುರಂ 106.97 95.81
ಪಾಲಕ್ಕಾಡ್ 106.77 95.63
ಪತ್ತನಂತಿಟ್ಟ 106.63 95.5
ತ್ರಿಶೂರ್ 106.48 95.35
ತಿರುವನಂತಪುರಂ 107.73 96.52
ವಯನಾಡ್ 106.66 95.55


