ವಯನಾಡು: ಪೂಕೊಡೆ ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಮೊನ್ನೆ ಮೊನ್ನೆಯಷ್ಟೇ ಗುಂಪು ರ್ಯಾಗಿಂಗ್ ನಡೆದಿರುವುದು ಪತ್ತೆಯಾಗಿದೆ. ಎರಡನೇ ವರ್ಷದ ವಿದ್ಯಾರ್ಥಿ ಜೆ.ಎಸ್.ಸಿದ್ಧಾರ್ಥ್ ಸಾವಿನ ನಂತರ, ತನಿಖೆ ಸಂದರ್ಭದಲ್ಲಿ ಹೆಚ್ಚಿನ ರ್ಯಾಗಿಂಗ್ ಪತ್ತೆಯಾಗಿದೆ.
ಇದರಿಂದಾಗಿ ಈ ಹಿಂದೆ ನಡೆದ ಘಟನೆಗಳಲ್ಲೂ ಕಾಲೇಜು ಅಧಿಕಾರಿಗಳು ಕ್ರಮ ಕೈಗೊಳ್ಳಿದ್ದಾರೆ. 2019 ಮತ್ತು 2021ರಲ್ಲಿ ಎರಡು ಘಟನೆಗಳಲ್ಲಿ 13 ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
2019 ರ ಬ್ಯಾಚ್ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಪ್ರಕರಣದಲ್ಲಿ ನಾಲ್ವರು ವಿದ್ಯಾರ್ಥಿಗಳಿಗೆ ಇಂಟರ್ನ್‍ಶಿಪ್ ನಿಷೇಧಿಸಲಾಗಿದೆ. ಕಾಲೇಜು ಐದು ವಿದ್ಯಾರ್ಥಿಗಳ ವಿದ್ಯಾರ್ಥಿವೇತನವನ್ನು ಸಹ ರದ್ದುಗೊಳಿಸಿದೆ. 2021ರ ಬ್ಯಾಚ್ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ 2 ಮಂದಿಯನ್ನು ಅಮಾನತುಗೊಳಿಸಲಾಗಿದ್ದು, ಇಬ್ಬರ ವಿದ್ಯಾರ್ಥಿ ವೇತನ ರದ್ದುಗೊಳಿಸಲಾಗಿದೆ. ಆ್ಯಂಟಿ ರ್ಯಾಗಿಂಗ್ ಸ್ಕ್ವಾಡ್ ತನಿಖೆ ವೇಳೆ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿದೆ. ಹೆಚ್ಚಿನ ತನಿಖೆಗಾಗಿ ಪೋಲೀಸರಿಗೆ ಮಾಹಿತಿಯನ್ನು ಹಸ್ತಾಂತರಿಸಲಾಗುವುದು.
ನೆಡುಮಂಗಡ ಮೂಲದ ಸಿದ್ಧಾರ್ಥ್ ಫೆಬ್ರವರಿ 18 ರಂದು ಹಾಸ್ಟೆಲ್‍ನ ಸ್ನಾನಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. 16 ಮತ್ತು 17 ರಂದು ಪ್ರೇಮಿಗಳ ದಿನಾಚರಣೆಗೆ ಸಂಬಂಧಿಸಿದಂತೆ ಕಾಲೇಜಿನಲ್ಲಿ ನಡೆದ ವಿವಾದದಿಂದ ಸಿದ್ಧಾರ್ಥ್ ಕಾಲೇಜಿನಲ್ಲಿ ಥಳಿತ ಮತ್ತು ಸಾರ್ವಜನಿಕ ವಿಚಾರಣೆಯನ್ನು ಎದುರಿಸಬೇಕಾಯಿತು ಎಂದು ಬಳಿಕ ಬೆಳಕಿಗೆ ಬಂದಿತು. ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆಗಳು ಮತ್ತು ಸಾರ್ವಜನಿಕ ಆಕ್ರೋಶದ ನಂತರ ಸರ್ಕಾರವು ಸಿದ್ಧಾರ್ಥ್ ಅವರ ಸಾವನ್ನು ಸಿಬಿಐಗೆ ವಹಿಸಿತು.


