HEALTH TIPS

ಎಸ್.ಎಫ್.ಐ.ಗಳ 'ಕೋಲ'; ಎಲ್.ಡಿ.ಎಫ್.ಗೆ ತಲೆನೋವು:ಅತೃಪ್ತಿ ವ್ಯಕ್ತಪಡಿಸಿದ ಪ್ರಮುಖರು

                ತಿರುವನಂತಪುರಂ: ಎಸ್‍ಎಫ್‍ಐನ ಹಿಂಸಾತ್ಮಕ ರಾಜಕಾರಣ ಎಲ್‍ಡಿಎಫ್ ಮತ್ತು ಎಡರಂಗಕ್ಕೆ ಬಹಳ ದಿನಗಳಿಂದ ತಲೆನೋವಾಗಿದೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಎಸ್‍ಎಫ್‍ಐ ತಲೆನೋವಿನಿಂದ ರಾಜ್ಯದಲ್ಲಿ ಎರಡು ಸಾವುಗಳು ಸಂಭವಿಸಿವೆ.

                   ಇದಾದ ಬಳಿಕ ಎಲ್‍ಡಿಎಫ್‍ನಲ್ಲಿಯೇ ಎಸ್‍ಎಫ್‍ಐ ವಿರುದ್ಧ ಅಸಮಾಧಾನ ಬಲವಾಗಿದೆ. ಪಕ್ಷಕ್ಕೆ ಸಹಾಯ ಮಾಡುವ ಬದಲು ವಿರೋಧಿ ಸಂಘಟನೆಗಳಿಗೆ ರಾಜಕೀಯ ಅಸ್ತ್ರ ನೀಡಿ ಪಕ್ಷದ ಹೆಸರು ಕೆಡಿಸಲು ಯತ್ನಿಸಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ.

               ಸರ್ಕಾರದ ವಿರುದ್ಧ ಪ್ರತಿಭಟನೆಗಳು ಮತ್ತು ಆರೋಪಗಳು ಬಲಗೊಂಡ ನಂತರ ಜೆಎಸ್ ಸಿದ್ಧಾರ್ಥ್ ಅವರ ಸಾವನ್ನು ಸಿಬಿಐಗೆ ವಹಿಸಲು ಮುಖ್ಯಮಂತ್ರಿ ನಿರ್ಧರಿಸಿದರು. ಪೂಕೋಡ್ ಪಶುವೈದ್ಯಕೀಯ ವಿಶ್ವವಿದ್ಯಾನಿಲಯದ ಎರಡನೇ ವರ್ಷದ ಪದವಿ ವಿದ್ಯಾರ್ಥಿ ಸಿದ್ಧಾರ್ಥ್, ಎಸ್‍ಎಫ್‍ಐ ನಡೆಸಿದ ಗುಂಪು ವಿಚಾರಣೆಯ ನಂತರ ನೊಂದು ಸಾವನ್ನಪ್ಪಿದ್ದಾನೆ. ಪ್ರಕರಣದ ಆರೋಪಿಗಳಲ್ಲಿ ಎಸ್‍ಎಫ್‍ಐ ಘಟಕದ ಕಾರ್ಯದರ್ಶಿ ಸೇರಿದ್ದಾನೆ. ಇದರ ಬೆನ್ನಲ್ಲೇ ಕೇರಳ ವಿಶ್ವವಿದ್ಯಾನಿಲಯ ಕಲೋತ್ಸವಕ್ಕೂ ವಿವಿ ಯೂನಿಯನ್ ಎಸ್‍ಎಫ್‍ಐ ಅಡ್ಡಿಪಡಿಸಿದೆ. ಲಂಚದ ಆರೋಪದ ನಂತರ ತೀರ್ಪುಗಾರ ಶಾಜಿ ಅವರ ಆತ್ಮಹತ್ಯೆ ಕೂಡ ಎಸ್‍ಎಫ್‍ಐ ಕಡೆಗೆ ಬೆರಳು ತೋರಿಸುತ್ತದೆ.

               ಮಾರ್ಗಂಕಳಿ ಸ್ಪರ್ಧೆಯಲ್ಲಿ ಮಾರ್ ಇವಾನಿಯೋಸ್ ಕಾಲೇಜಿಗೆ ಪ್ರಥಮ ಸ್ಥಾನ ಲಭಿಸಿದ ಹಿನ್ನೆಲೆಯಲ್ಲಿ ಲಂಚದ ಆರೋಪ ಕೇಳಿ ಬಂದಿದು. ಎಸ್‍ಎಫ್‍ಐ ನಾಯಕತ್ವದ ಅರಿವಿನ ಮೇರೆಗೆ ಸಂಘಟಕರೇ ಫಲಿತಾಂಶದ ಕುರಿತು ತೀರ್ಪುಗಾರರ  ವಿರುದ್ಧ ದೂರು ದಾಖಲಿಸಿದ್ದಾರೆ. ಎಸ್‍ಎಫ್‍ಐ ಜಿಲ್ಲಾ ಮುಖಂಡರು ವಿವಿಧ ಕಲೋತ್ಸವ ಸಮಿತಿಗಳ ಸಮನ್ವಯ ಜವಾಬ್ದಾರಿ ವಹಿಸಿದ್ದರು. ಶಾಜಿ ಮಾನಸಿಕ ಮತ್ತು ದೈಹಿಕ ಹಿಂಸೆ ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇಡೀ ಕುಟುಂಬ ಆರೋಪಿಸಿದೆ. ಇದು ಎಸ್‍ಎಫ್‍ಐಯತ್ತ ನಿಚ್ಚಳ ಬೆರಳು ತೋರಿಸಿದೆ. 

               ಸಿಪಿಐ ರಾಜ್ಯ ಕಾರ್ಯದರ್ಶಿ ಬೆನೊಯ್ ವಿಶ್ವಂ ಅವರು ಎಡರಂಗ ಮತ್ತು ಸರ್ಕಾರಕ್ಕೆ ಎಸ್‍ಎಫ್‍ಐ ಉಂಟುಮಾಡುತ್ತಿರುವ ತಲೆನೋವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಪಶುವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿ ನಡೆದ ಘಟನೆಯ ಬಗ್ಗೆ ಮುಖ್ಯಮಂತ್ರಿಗಳು ನೇರವಾಗಿ ಪಕ್ಷದ ನಾಯಕತ್ವದೊಂದಿಗೆ ಅಸಮಾಧಾನವನ್ನು ಹಂಚಿಕೊಂಡರು. ಎಸ್‍ಎಫ್‍ಐ ಅನ್ನು ನಿಯಂತ್ರಿಸಲು ಸಿಪಿಎಂಗೆ ಸಾಧ್ಯವಾಗುತ್ತಿಲ್ಲ ಎಂದು ಎಲ್ ಡಿ ಎಫ್ ಹೇಳುತ್ತಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries