ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್ ವಾರ್ಷಿಕ ಯೋಜನೆಯಲ್ಲಿ ಮಹಿಳಾ ಘಟಕ ಯೋಜನೆಗೆ ಸೇರಿಸಿದ್ದ ಮುಟ್ಟಿನ ಕಪ್ ವಿತರಣೆ ನಡೆಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್ ವಿತರಣೆಯನ್ನು ಉದ್ಘಾಟಿಸಿದರು. ಎಫ್ ಎಚ್ ಸಿ ವೈದ್ಯಾಧಿಕಾರಿ ಡಾ.ಸ್ಮಿತಾ ಜಾಗೃತಿ ತರಗತಿ ನಡೆಸಿದರು. ಪಂಚಾಯತಿ ಉಪಾಧ್ಯಕ್ಷ ನಾಸರ್ ಮೊಗ್ರಾಲ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಬೂರ, ಬಿ.ಎ.ರಹಮಾನ್, ನಸೀಮಾ ಖಾಲಿದ್ ಹಾಗೂ ಪಂಚಾಯಿತಿ ಸದಸ್ಯರಾದ ಕೌಲತ್ ಬೀವಿ, ಶೋಭಾ, ಪ್ರೇಮಲತಾ, ಪ್ರೇಮಾವತಿ, ರವಿರಾಜ್, ರಿಯಾಜ್ ಮಾತನಾಡಿದರು. ಪಂಚಾಯಿತಿ ಅಧಿಕಾರಿಗಳು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಹಾಗೂ ಫಲಾನುಭವಿಗಳು ಭಾಗವಹಿಸಿದ್ದರು.ಪಂಚಾಯತಿ ಸಹಾಯಕ ಕಾರ್ಯದರ್ಶಿ ಕಾಲೇಶ್ ಸ್ವಾಗತಿಸಿ, ಜೆ.ಎಚ್.ಐ.ಆದಿತ್ಯನ್ ವಂದಿಸಿದರು.


