ತಿರುವನಂತಪುರ: ಅಕ್ರಮವಾಗಿ ನಿರ್ಮಿಸಿರುವ ಬೋರ್ಡ್‍ಗಳು ಮತ್ತು ಕಮಾನುಗಳನ್ನು ತೆಗೆದುಹಾಕಲು ಮಾನವ ಹಕ್ಕುಗಳ ಆಯೋಗ ಸೂಚಿಸಿದೆ.
ಆಯೋಗದ ಅಧ್ಯಕ್ಷ ಕೆ.ಬೈಜುನಾಥ್ ಮಾತನಾಡಿ, ಕಮಾನುಗಳ ಅಳವಡಿಕೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿರುವರು.
ಅಕ್ರಮವಾಗಿ ನಿರ್ಮಿಸಿರುವ ಕಮಾನುಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಸುರಕ್ಷಿತ ಸ್ವಾತಂತ್ರ್ಯ ನೀಡುವಂತೆ ಒತ್ತಾಯಿಸಿ ಸಲ್ಲಿಸಲಾದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಇರಬೇಕು ಎಂದು ಆಯೋಗ ಹೇಳಿದೆ.
ಈ ನಿಟ್ಟಿನಲ್ಲಿ ಹೈಕೋರ್ಟ್ ಹಲವು ಆದೇಶಗಳನ್ನು ಹೊರಡಿಸಿರುವುದನ್ನು ಆಯೋಗದ ಆದೇಶ ಎತ್ತಿ ತೋರಿಸುತ್ತದೆ. ತಿರುವನಂತಪುರಂ ಮಹಾನಗರ ಪಾಲಿಕೆ ಕಾರ್ಯದರ್ಶಿ ಈ ವಿಚಾರದಲ್ಲಿ ಮುನ್ಸಿಪಲ್ ಕಾಪೆರ್Çರೇಷನ್ ಎಚ್ಚರವಹಿಸುತ್ತದೆ ಎಂದು ಭರವಸೆ ನೀಡಿದರು.


