ಕಾಸರಗೋಡು: ಉತ್ತರ ಭಾರತ ಕೇಂದ್ರೀಕರಿಸಿ ನಡೆಯುತ್ತಿದ್ದ ಆನ್‍ಲೈನ್ ವಂಚನಾ ಪ್ರಕರಣಕ್ಕೆ ಸಂಬಂಧಿಸಿ ಕಾಞಂಗಾಡು ನಿವಾಸಿ ಮಹಮ್ಮದ್ ಹನೀಫ್ ಎಂಬಾತನನ್ನು ಕೂತುಪರಂಬ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೂತುಪರಂಬದ ವಳಿಯಂಬ್ರ ಪಿ.ಆರ್ ನಗರ ನಿವಾಸಿ ಸತೀಶನ್ ನೀಡಿದ ದೂರಿನ ಮೇರೆಗೆ ಈತನನ್ನು ಬಂಧಿಸಲಾಗಿದೆ.
ಫೆ. 29ರಂದು ಫೋನ್ ಹಾಗೂ ವಾಟ್ಸಪ್ ಕರೆಗಳ ಮೂಲಕ ಪರಿಚಯಗೊಂಡ ವ್ಯಕ್ತಿಯೊಬ್ಬ ಸಾಲದ ಭರವಸೆ ನೀಡಿದ ಹಿನ್ನೆಲೆಯಲ್ಲಿ ಲೋನ್ ಆ್ಯಪ್ ಮೂಲಕ ಸತೀಶ್ ಅರ್ಜಿ ಸಲ್ಲಿಸಿದ್ದರು. ನಂತರ ಲೋನ್ ಚಾರ್ಜ್ ಆಗಿ ಹಲವು ಬಾರಿ ಹಣ ಸಂದಾಯ ಮಾಡುವಂತೆ ತಿಳಿಸಿದ್ದಾರೆ. ಈ ಹಣ ದೆಹಲಿಯ ಖಾತೆಯೊಂದಕ್ಕೆ ರವಾನೆಯಾಗುತ್ತಿದ್ದು, ನಂತರ ಈ ಹಣ ಕಾಞಂಗಾಡು ನಿವಾಸಿ ಮಹಮ್ಮದ್ ಹನೀಫ್ ಖಾತೆಗೆ ಜಮೆಯಾಗುತ್ತಿರುವುದನ್ನು ಪತ್ತಹಚ್ಚಲಾಗಿತ್ತು. ವಂಚನೆ ಅರಿತ ಸತೀಶ್ ಪೊಲಿಸರಿಗೆ ದೂರು ನೀಡಿದ್ದರು. ಈ ನಿಟ್ಟಿನಲ್ಲಿ ಪೊಲಿಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಸೆರೆಹಿಡಿಯಲಾಗಿದೆ.

