ಮಧೂರು : ಮಧೂರು ಶ್ರೀಮದನಂತೇಶ್ವರ ಸಿದ್ದಿವಿನಾಯಕ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಶನಿವಾರ ಆರಂಭಗೊಂಡಿದ್ದು, ದಿನನಿತ್ಯ ಸಾವಿರಾರು ಭಜಕರು ಶ್ರೀಕ್ಷೇತ್ರ ತಲುಪಿ ಉತ್ಸವಗಳಲ್ಲಿ ಪಾಲ್ಗೊಂಡು ಪುನೀತರಾಗುತ್ತಿದ್ದಾರೆ.
ನಿನ್ನೆ ಬೆಳಗ್ಗೆ 5 ಕ್ಕೆ ದೀಪೋತ್ಸವ, ತುಲಾಭಾರ ಸೇವೆ, ರಾತ್ರಿ 8 ರಿಂದ ನಡುದೀಪೋತ್ಸವ, ಉತ್ಸವ ಬಲಿ, ಸೇವೆ ಸತ್ತು ನಡೆಯಿತು.
ಇಂದು ಬೆಳಗ್ಗೆ 5 ಕ್ಕೆ ಉತ್ಸವ ಬಲಿ ನಡೆಯಿತು. ಬಳಿಕ ದೀಪೋತ್ಸವ, ದರ್ಶನಬಲಿ ನಡೆಯಲಿದೆ. ಸಂಜೆ 5 ಕ್ಕೆ ತಾಯಂಬಕ, ದೀಪಾರಾಧನೆ, 7 ಕ್ಕೆ ಉತ್ಸವ ಬಲಿ, ಮೂಲಸ್ಥಾನ ಉಳಿಯತ್ತಡ್ಕಕ್ಕೆ ಶ್ರೀದೇವರ ಬಲಿ ಶೋಭಾಯಾತ್ರೆ, ತಾಲೀಮು ಪ್ರದರ್ಶನ, 8.30 ಕ್ಕೆ ಮೂಲಸ್ಥಾನ ಉಳಿಯತ್ತಡ್ಕದಲ್ಲಿ ಕಟ್ಟೆಪೂಜೆ, 10 ರಿಂದ ಮಧೂರು ಬೆಡಿಕಟ್ಟೆಯಲ್ಲಿ ಸಾಂಪ್ರದಾಯಿಕ ಸಿಡಿಮದ್ದು ಪ್ರದರ್ಶನ ನಡೆಯಲಿದೆ.





