ಕಾಸರಗೋಡು: ಲೋಕಸಭಾ ಚುನಾವಣೆಯ ಭಾಗವಾಗಿ ಮೂರು ದಿನಗಳಿಂದ ನಡೆಯುತ್ತಿದ್ದ ಮತಗಟ್ಟೆ ಅಧಿಕಾರಿಗಳ ತರಬೇತಿ ಕಾರ್ಯಕ್ರಮ ಮುಕ್ತಾಯಗೊಂಡಿದೆ.
ಮಂಜೇಶ್ವರ ಕ್ಷೇತ್ರದ ಜಿಎಚ್‍ಎಸ್‍ಎಸ್ ಕುಂಬಳೆ, ಕಾಸರಗೋಡು ಕ್ಷೇತ್ರದ ಕಾಸರಗೋಡು ಸರ್ಕಾರಿ ಕಾಲೇಜು, ಉದುಮ ಕ್ಷೇತ್ರದ ಚೆಮ್ನಾಡ್ ಜಮಾಯತ್ ಹೈಯರ್ ಸೆಕೆಂಡರಿ ಶಾಲೆ, ಕಾಂಞಂಗಾಡ್ ಕ್ಷೇತ್ರದ ದುರ್ಗಾ ಹೈಯರ್ ಸೆಕೆಂಡರಿ ಶಾಲೆ ಕಾಂಞಂಗಾಡ್ ತ್ರಿಕರಿಪುರ ಕ್ಷೇತ್ರದ ಸ್ವಾಮಿ ನಿತ್ಯಾನಂದ ಪೆÇೀಲಿಟೆಕ್ನಿಕ್ ಎಂಬ ಐದು ಕೇಂದ್ರಗಳಲ್ಲಿ ತರಬೇತಿ ಕಾರ್ಯಕ್ರಮ ನಡೆದಿದೆ.
ಜಿಲ್ಲಾಧಿಕಾರಿ ಕೆ.ಇಂಬಾಶೇಖರ್ ಅವರ ಮೇಲ್ನೋಟದಲ್ಲಿ ನಡೆದ ತರಬೇತಿಯಲ್ಲಿ ನೋಡಲ್ ಅಧಿಕಾರಿ ಕಾಞಂಗಾಡ್, ಎಆರ್‍ಓ ಆದ ಉಪಜಿಲ್ಲಾ ಅಧಿಕಾರಿ ಸುಫಿಯಾನ್ ಅಹಮ್ಮದ್, ಸಹಾಯಕ ಚುನಾವಣಾಧಿಕಾರಿಯಾದ ಜಗ್ಗಿ ಫೆÇೀಲ್, ಪಿ.ಬಿನು ಮೋನ್, ನಿರ್ಮಲ್ ರೀಟಾ ಗೋಮ್ಸ್, ಪಿ.ಶಾಜು, ತರಬೇತಿ ಸಹಾಯಕ ನೋಡಲ್ ಅಧಿಕಾರಿ ಕೆ.ಬಾಲಕೃಷ್ಣನ್, ವಿಧಾನಸಭಾ ಮಟ್ಟದ ಮಾಸ್ಟರ್ ಟ್ರೈನರ್‍ಗಳು ತರಬೇತಿಯನ್ನು ನಡೆಸಿದರು. ತರಬೇತಿಯ ಜೊತೆಗೆ ಮತಗಟ್ಟೆ ಅಧಿಕಾರಿಗಳಿಗೆ ಕರ್ತವ್ಯದ ಪ್ರಮಾಣ ಪತ್ರವನ್ನು ವಿತರಿಸಿದರು, ಎಲ್ಲಾ ಕೇಂದ್ರಗಳಲ್ಲಿಯೂ ಸೌಲಭ್ಯ ಕೇಂದ್ರಗಳನ್ನು ತೆರೆಯಲಾಗಿದೆ.

