ಕಾಸರಗೋಡು: ನಿರ್ಮಾಣ ವಲಯದ ಸಾಮಗ್ರಿಗಳ ಬೆಲೆಯೇರಿಕೆಯನ್ನು ನಿಯಂತ್ರಿಸಬೇಕೆಂದು ರೆನ್ಸ್‍ಫೆಡ್ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಕಾಸರಗೋಡಿನಲ್ಲಿ ನಡೆದ ಜಿಲ್ಲಾ ಸೆಮಿನಾರ್‍ನಲ್ಲಿ ಈ ಬಗ್ಗೆ ಒತ್ತಾಯಿಸಲಾಗಿದೆ. ಸಿಮೆಂಟ್‍ಗೆ 40 ರೂ, ಕಬ್ಬಿಣ ಉತ್ಪನ್ನಗಳಿಗೆ 17 ರೂ., ಇಲೆಕ್ಟ್ರಿಕ್ ಸಾಮಗ್ರಿಗಳಿಗೆ 25 ರೂ., ಪ್ಲಂಬಿಂಗ್ ಸಾಮಗ್ರಿಗಳಿಗೆ 100 ರೂ. ಕಳೆದ ತಿಂಗಳಿನಿಂದ ಕಂಪೆನಿಗಳು ಹೆಚ್ಚಿಸಿವೆ ಎಂದು ಆರೋಪಿಸಿದೆ.
ಸೆಮಿನಾರನ್ನು ಮಾಜಿ ರಾಜ್ಯ ಕಾರ್ಯದರ್ಶಿ ಅಬ್ದುಲ್ ಸಲಾಂ ಉದ್ಘಾಟಿಸಿದರು. ಪವಿತ್ರನ್ ನ್ಯಾನಿಕಡವ್ ಅಧ್ಯಕ್ಷತೆ ವಹಿಸಿದ್ದರು. ಪ್ರದೀಪ್ ಟಿ.ಜಿ, ಮಧು ಎಸ್.ನಾಯರ್, ಮುಜೀಬ್ ರೆಹ್ಮಾನ್, ಅನೀಶ್, ಸುಂದರೇಶನ್, ಜಿಮ್ಮಿ ಮಾತನಾಡಿದರು.

