HEALTH TIPS

ಹೀಗೊಂದು ದಾಖಲೆ: ಮಧ್ಯಾಹ್ನದ ಮೊದಲೇ ಮುಗಿದ ಮತದಾನ!: ದೇಶದಲ್ಲೇ ಮೊದಲು: ವನವಾಸಿ ಗ್ರಾಮದಲ್ಲಿ ಶೇ.100 ಮತದಾನ

                 ನವದೆಹಲಿ: ನಿನ್ನೆ ನಡೆದ ಸಾರ್ವತ್ರಿಕ ಚುನಾವಣೆಯ ಐದನೇ ಹಂತದಲ್ಲಿ  ದೇಶದಾದ್ಯಂತ ಕಡಮೆ ಮತದಾನವಾಗಿದೆ ಎಂಬ ಸುಳ್ಳು ವದಂತಿಗಳ ನಡುವೆ ಉತ್ತರ ಪ್ರದೇಶದ ಲಲಿತ್‍ಪುರ ಜಿಲ್ಲೆಯ ಝಾನ್ಸಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬುಡಕಟ್ಟು ಗ್ರಾಮಗಳು 100 ಪ್ರತಿಶತದಷ್ಟು ಮತದಾನವನ್ನು ದಾಖಲಿಸುವ ಮೂಲಕ ವಿಸ್ಮಯಗೊಳಿಸಿದೆ. 

                ಆ ಮೂರು ಗ್ರಾಮಗಳೆಂದರೆ ಸೌಲ್ದಾ, ಬಹ್ಮೌರಾ ನಾಗಲ್ ಮತ್ತು ಬುದ್ನಿ ನರಹತ್, ಇವುಗಳು ಹೆಚ್ಚಾಗಿ ಅರಣ್ಯವಾಸಿಗಳಿರುವ ಗ್ರಾಮಗಳು.

                 ಇದರಲ್ಲಿ ಸೌಲ್ಡಾ ಗ್ರಾಮವು ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಿಸಿದೆ.  ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನವು ಸೌಲ್ಡಾ ಗ್ರಾಮದ ಏಕೈಕ ಮತಗಟ್ಟೆ 277ರಲ್ಲಿ ಮಧ್ಯಾಹ್ನ 12 ಗಂಟೆ ವೇಳೆಗೆ ಶೇ.100ರಷ್ಟು ದಾಖಲಾಗಿ ಮುಕ್ತಾಯಗೊಂಡಿತು. ಸೌಲ್ದಾಹ್ ಎಂಬುದು ಝಾನ್ಸಿ ಲೋಕಸಭಾ ಕ್ಷೇತ್ರದಲ್ಲಿರುವ ಮೆಹ್ರಾನಿ ಅಸೆಂಬ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬುಡಕಟ್ಟು ಗ್ರಾಮವಾಗಿದೆ. 198 ಮಂದಿ ಪುರುಷರು, 177 ಮಂದಿ ಮಹಿಳೆಯರು ಸೇರಿ ಒಟ್ಟು 375 ಮತದಾರರಿದ್ದಾರೆ. ಮತದಾನ ಆರಂಭಗೊಂಡು ಐದು ಗಂಟೆಯೊಳಗೆ ಎಲ್ಲ ಮತಗಳು ದಾಖಲಾದ ಘಟನೆ ದೇಶದಲ್ಲಿ ಇದೇ ಮೊದಲು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

            ಸೌಲ್ದಾ ಗ್ರಾಮದಲ್ಲಿ ಶೇ 100 ಮತದಾನವಾಗುವಂತೆ ಬಿಡಿಒ ಸೌರಭ್ ಬರನ್ವಾಲ್ ಅವರ ಉತ್ಸಾಹವು ಫಲ ನೀಡಿದೆ. ಅವರು ನಿರಂತರವಾಗಿ ಗ್ರಾಮಸ್ಥರಿಗೆ ಮತದಾನದ ಹಕ್ಕಿನ ಬಗ್ಗೆ ತಿಳುವಳಿಕೆ ನೀಡಿದ್ದರು. ಬಿಡಿಒ ಸೌರಭ್ ಬನ್ರ್ವಾಲ್ ಅವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಇಬ್ಬರಿಗೆ ಭೋಪಾಲ್‍ಗೆ ತಮ್ಮ ಜೇಬಿನಿಂದ ವಿಮಾನ ಟಿಕೆಟ್ ಖರೀದಿಸಿ ಕರೆಸಿದ್ದಾರೆ. ಲಲಿತ್‍ಪುರ ಡಿಎಂ ಅಕ್ಷಯ್ ತ್ರಿಪಾಠಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭೋಪಾಲ್‍ನಿಂದ ಸೌಲ್ದಾ ಗ್ರಾಮಕ್ಕೆ ರಾಜ್ಯ ಸರ್ಕಾರದ ವಾಹನದಲ್ಲಿ ಕರೆದೊಯ್ದರು. ಇದಲ್ಲದೇ ಮತದಾನದ ದಿನದಂದು 18 ಸಾವಿರ ರೂಪಾಯಿ ಖರ್ಚು ಮಾಡಿ 30 ಮಂದಿಯನ್ನು ಇಂದೋರ್‍ನಿಂದ ಬಸ್ ಮೂಲಕ ಮನೆಗೆ ಕರೆತರಲಾಗಿತ್ತು.

           ಗ್ರಾಮದ ಜನತೆಗೆ ಮತದಾನದ ಮಹತ್ವದ ಬಗ್ಗೆ ನಿರಂತರವಾಗಿ ಅರಿವು ಮೂಡಿಸಲಾಗುತ್ತಿದೆ ಎಂದು ಗ್ರಾಮದ ಮುಖಂಡ ಶ್ರೀ ಬಾಯಿ ಹೇಳಿದರು. ಮತದಾನ ಮಾಡುವುದು ಕರ್ತವ್ಯ ಮತ್ತು ಹಕ್ಕು ಎಂದು ಅಧಿಕಾರಿಗಳು ಹೇಳುತ್ತಲೇ ಇದ್ದರು. ಎಲ್ಲಾ ಮತದಾರರನ್ನು ಅಧಿಕಾರಿಗಳು ಸರಿಯಾಗಿ ನಿರ್ವಹಿಸಿದರು. ಅದಕ್ಕಾಗಿಯೇ ಈ ದಾಖಲೆಯನ್ನು ನಿರ್ಮಿಸಲು ಸಾಧ್ಯವಾಯಿತು.

              ಲಲಿತ್‍ಪುರ ಎಡಿಎಂ ಅಂಕುರ್ ಶ್ರೀವಾಸ್ತವ ಮಾತನಾಡಿ, ಸೌಲ್ದಾ ಗ್ರಾಮದೊಂದಿಗೆ ಬಾರ್ ಬ್ಲಾಕ್‍ನ ಬಹ್ಮೌರಾ ನಾಗಲ್ ಮತ್ತು ಬುದ್ನಿ ನರಹತ್‍ನಲ್ಲಿ ಶೇಕಡಾ 100 ರಷ್ಟು ಮತದಾನವಾಗಿದೆ. ಬಹ್ಮೌರಾ ನಾಗಲ್‍ನಲ್ಲಿ 235 ಪುರುಷರು ಮತ್ತು 206 ಮಹಿಳೆಯರು ಸೇರಿದಂತೆ 441 ಮತದಾರರಿದ್ದರೆ, ಬುದ್ನಿ ನಾರಾದಲ್ಲಿ 116 ಪುರುಷರು ಮತ್ತು 99 ಮಹಿಳೆಯರು ಸೇರಿದಂತೆ 215 ಮತದಾರರಿದ್ದಾರೆ.

           ಝಾನ್ಸಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅನುರಾಗ್ ಶರ್ಮಾ, ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಜೈನ್ ಮತ್ತು ಬಿಎಸ್‍ಪಿಯ ರವಿ ಕುಶ್ವಾಹ ನಡುವೆ ಪೈಪೆÇೀಟಿ ಏರ್ಪಟ್ಟಿತ್ತು. ಈ ಬಾರಿ 10 ಅಭ್ಯರ್ಥಿಗಳು ಕಣದಲ್ಲಿದ್ದರು. 

           ಝಾನ್ಸಿ ಲೋಕಸಭಾ ಕ್ಷೇತ್ರದಲ್ಲಿ ಶೇ.63.57ರಷ್ಟು ಮತಗಳು ದಾಖಲಾಗಿವೆ. ಮೆಹ್ರೌನಿ ವಿಧಾನಸಭಾ ಕ್ಷೇತ್ರವೊಂದರಲ್ಲೇ ಶೇ.70.41ರಷ್ಟು ಮತದಾನವಾಗಿದೆ.Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries