ಪೆರ್ಲ: ಸಾಯದ ಮಾತೃಭೂಮಿ ಗ್ರಾಮೀಣ ಗ್ರಂಥಾಲಯ ನೇತೃತ್ವದಲ್ಲಿ ಕುಣಿತ ಭಜನಾ ತರಬೇತಿಯ ಉದ್ಘಾಟನಾ ಸಮಾರಂಭವು ಗಣ್ಯರ,ಮುಖ್ಯ ಅತಿಥಿಗಳ ಹಾಗೂ ಕಲಾಭಿಮಾನಿಗಳ ಉಪಸ್ಥಿತಿಯಲ್ಲಿ ವರ್ಣಮಯವಾಗಿ ನೆರವೇರಿತು. ಸಾಯ ಪ್ರದೇಶದ ಜನತೆಯ ಅಪೇಕ್ಷಯಂತೆ "ಕುಣಿತ ಭಜನೆ ತರಭೇತಿ"ಯನ್ನು ಆರಂಭಿಸಲಾಗಿದ್ದು ತರಬೇತಿಯ ಗುರುಗಳಾದ ರಾಜೇಶ್ ವಿಟ್ಲ ಕಾರ್ಯಕ್ರಮ ಉದ್ಘಾಟಿಸಿ ಕುಣಿತ ಭಜನೆಯ ಮಹತ್ವವನ್ನು ವಿವರಿಸಿ, ಕುಣಿತ ಭಜನೆ ನೃತ್ಯ ತರಗತಿ ಆರಂಭಿಸಿ ಶುಭಹಾರೈಸಿದರು. ಆರ್. ಕೆ ಕಲಾ ತಂಡದ ಸದಸ್ಯರು ವಿದ್ಯಾರ್ಥಿಗಳಿಗೆ ತರಗತಿಯನ್ನು ನಡೆಸಿಕೊಟ್ಟರು.
ಡ್ರಾಮಾ ಜ್ಯೂನಿಯರ್ ಖ್ಯಾತಿಯ ರಿಷಿತ್ ರಾಜ್ ವಿಟ್ಲ ಮುಖ್ಯ ಅತಿಥಿಯಾಗಿದ್ದರು. ಅರವಿಂದ ಆಚಾರ್ಯ ಮಾಣಿಲ ಮಕ್ಕಳಿಗೆ ಭಜನೆ ಹಾಡಿಸಿ ಶುಭ ಹಾರೈಸಿದರು. ಜಯಶ್ರೀ ಹಿತವಚನ ನುಡಿದರು.
ಅಧ್ಯಕ್ಷತೆ ವಹಿಸಿದ ಗೋವಿಂದ ಮಾಸ್ತರ್ ಅವರು, ಭಜನೆ ಒಗ್ಗಟ್ಟನ್ನು ಕಲಿಸಿಕೊಡುತ್ತದೆ. ನಾವು ಕಲೆಯ ಮೂಲಕ ಕಲಾಸರಸ್ವತಿಯನ್ನು ಕಾಣಬೇಕು ಎಂಬ ಸಂದೇಶ ಸಾರಿದರು. ಗ್ರಂಥಾಲಯದ ಅಧ್ಯಕ್ಷ ಪ್ರಭಾಕರ ಎಸ್, ಗ್ರಂಥಾಲಯದ ಧ್ಯೇಯವನ್ನು ತಿಳಿಸಿದರು. ಸಾಯ ಗ್ರಂಥಾಲಯದ ಕಾರ್ಯದರ್ಶ ಸೂರಜ್ ಬಿ ಮಾತನಾಡಿ, ಗ್ರಂಥಾಲಯ ತೆರೆದಿರುವುದು ಸಾಯದ ಪ್ರಗತಿಗಾಗಿ.ಬೇಡಿಕೆಗಳಿದ್ದರೆ ಗ್ರಂಥಾಲಯಕ್ಕೆ ಮನವಿ ಮಾಡಿ. ಗ್ರಂಥಾಲಯ ಸಾಧ್ಯವಾದಷ್ಟು ಮಟ್ಟಿಗೆ ಬೇಡಿಕೆಯನ್ನು ಈಡೇರಿಸುವ ಪ್ರಯತ್ನ ಮಾಡುತ್ತದೆ ಎಂಬ ಭರವಸೆ ನೀಡಿದರು. ಹರ್ಷಿತಾ ಸಾಯ, ಧನ್ಯಾ ಸಾಯ ಪ್ರಾರ್ಥನೆ ಹಾಡಿದರು. ಅಶೋಕ್ ಚವರ್ಕಾಡ್ ಸ್ವಾಗತಿಸಿ, ಪ್ರಭಾಕರ ಎಸ್ ವಂದಿಸಿದರು.

.jpg)
.jpg)
